ದಾವಣಗೆರೆ: ರೈಲ್ವೆ ಹಳಿ ಮೇಲೆ ಫೋಟೋ ಶೂಟ್ಗೆ ಹೋಗಿದ್ದ ವೇಳೆ ಬಾಲಕನಿಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಆತ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಸಚಿನ್ (16) ಮೃತ ಬಾಲಕ ಎಂದು ಗುರುತಿಸಲಾಗಿದೆ. ಭಾನುವಾರ ಆಗಿದ್ದರಿಂದ ಸಚಿನ್ ಸ್ನೇಹಿತರ ಜೊತೆಗೂಡಿ ಫೋಟೋಶೂಟ್ಗಾಗಿ ಡಿಸಿಎಂ ಟೌನ್ ಶಿಪ್ ಬಳಿಯಿರುವ ರೈಲ್ವೆ ಸ್ಟೇಷನ್ಗೆ ತೆರಳಿದ್ದರು. ಇಲ್ಲಿ ಎರಡು ಹಳಿಗಳಿದ್ದು, ಒಂದು ಹಳಿಯಲ್ಲಿ ಸಚಿನ್ ನಿಂತುಕೊಂಡು ಮತ್ತೊಂದು ಹಳಿಯಲ್ಲಿ ರೈಲು ಸಂಚರಿಸಿದ್ರೆ ಫೋಟೋ ಉತ್ತಮವಾಗಿ ಬರುತ್ತದೆ ಎಂದು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದ.
ಇದನ್ನೂ ಓದಿ: ರಾಜ್ಯದಲ್ಲಿಂದು 50,210 ಕೊರೊನಾ ಪಾಸಿಟಿವ್.. 165 ಜನರಿಗೆ ವಕ್ಕರಿಸಿದ ಒಮಿಕ್ರಾನ್
ಆದರೆ ದುರದೃಷ್ಟ ಎಂದರೆ ರೈಲು ಪಕ್ಕದ ಹಳಿಯ ಬದಲಿಗೆ ಬಾಲಕ ಇದ್ದ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ರೈಲ್ವೆ ಮತ್ತು ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ