ETV Bharat / state

ಪ್ರಧಾನಿಗೆ ಸ್ಪೆಷಲ್ ಗಿಫ್ಟ್: ಸಿದ್ಧವಾಯ್ತು ಶ್ರೀರಾಮ, ಅಯೋಧ್ಯೆ ಚಿತ್ರವಿರುವ 15 ಕೆಜಿ ಬೆಳ್ಳಿ ಇಟ್ಟಿಗೆ

ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾವೇಶದ ಅಂಗವಾಗಿ ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಳ್ಳಿ ಇಟ್ಟಿಗೆ ಉಡುಗೊರೆ ನೀಡಲು ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ಸಿದ್ಧತೆ ನಡೆಸಿದೆ.

gift
ಬೆಳ್ಳಿ ಇಟ್ಟಿಗೆ
author img

By

Published : Mar 25, 2023, 12:43 PM IST

Updated : Mar 25, 2023, 2:02 PM IST

ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಗಿಫ್ಟ್ ನೀಡಲು ನಿರ್ಧಾರ ಮಾಡಲಾಗಿದೆ. ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಮೋದಿಗೆ ಶ್ರೀರಾಮ ಮತ್ತು ಅಯೋಧ್ಯೆಯ ಚಿತ್ರವಿರುವ ಬೆಳ್ಳಿ ಇಟ್ಟಿಗೆ ಉಡುಗೊರೆ ನೀಡಲು ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ಮುಂದಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಅಡಿಗಲ್ಲು ಹಾಕಿ, ಉದ್ಘಾಟನಾ ಕಾರ್ಯ ನೆರವೇರಿಸುತ್ತಿರುವ‌ ಪ್ರಧಾನಿ ಮೋದಿಯವರಿಗೆ ಈ ಗಿಫ್ಟ್ ನೀಡಲಾಗುತ್ತಿದೆ. ಪುಣೆಯಲ್ಲಿ‌ ನಿರ್ಮಾಣವಾಗಿರುವ 15 ಕೆ ಜಿ ತೂಕದ ಬೆಳ್ಳಿ ಇಟ್ಟಿಗೆ ಇದಾಗಿದೆ. ಇದರ ಮೇಲೆ ದಾವಣಗೆರೆಯಲ್ಲಿ 1990 ರಲ್ಲಿ ರಾಮಜ್ಯೋತಿ ಯಾತ್ರೆಯಲ್ಲಿ ಗೋಲಿಬಾರ್​ನಲ್ಲಿ ಸಾವನ್ನಪ್ಪಿದ 8 ಮಂದಿಯ ಹೆಸರುಗಳನ್ನು ವಿಶೇಷವಾಗಿ ಕೆತ್ತಲಾಗಿದೆ. ಇದಲ್ಲದೆ, ಬಿಜೆಪಿ ಪಕ್ಷದ ಚಿಹ್ನೆ ಮತ್ತು ಜೈ ಶ್ರೀರಾಮ್ ಎಂದು ಬರೆಯಲಾಗಿದೆ. ಅದೃಷ್ಟ ಎಂಬಂತೆ ಜಿಲ್ಲೆಗೆ ಆಗಮಿಸುತ್ತಿರುವ ಮೋದಿಯವರಿಗೆ ಈ ಗಿಪ್ಟ್ ನೀಡುವ ಮೂಲಕ ಅಯೋಧ್ಯೆಗೆ ಹಸ್ತಾಂತರಿಸಲಾಗುತ್ತಿದೆ.

ಇದನ್ನೂ ಓದಿ : ರಾಮನಗರದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ

ವಿಜಯ ಸಂಕಲ್ಪ ಯಾತ್ರೆ ಸಮಾರೋಪಕ್ಕೆ ಸಿದ್ಧತೆ : ಮುಂಬರುವ ವಿಧಾನಸಭಾ ಚುನಾವಣೆ ಅಂಗವಾಗಿ ಬಿಜೆಪಿಯು ರಾಜ್ಯದ ನಾಲ್ಕು ಕಡೆಯಿಂದ ಮಾರ್ಚ್‌ 1ರಂದು ಆರಂಭಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ದಾವಣಗೆರೆ ಸಿದ್ಧವಾಗಿದೆ. ಈ ಮಹಾಸಂಗ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಈಗಾಗಲೇ ಇಲ್ಲಿನ ಜಿಎಂಐಟಿ ಸಂಸ್ಥೆ ಬಳಿ 400 ಎಕರೆ ವಿಸ್ತೀರ್ಣದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, ವಿವಿಧೆಡೆಯಿಂದ ಜನರನ್ನು ಕರೆತರಲು 10,000 ಬಸ್‌ ಹಾಗೂ ಸಾವಿರಾರು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಮಾ 25ಕ್ಕೆ ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮೇನಿಯಾ; ಸಮಾವೇಶದಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

Last Updated : Mar 25, 2023, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.