ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ತಾಯಿಯೊಬ್ಬಳು ತನ್ನ ಪುಟ್ಟ ಕಂದನನ್ನು ನೇಣಿಗೆ ಹಾಕಿ ನಂತರ ತಾನೂ ಕೂಡಾ ನೇಣು ಕುಣಿಕೆಗೆ ಕೊರಳೊಡ್ಡಿದ್ದಾಳೆ. ಘಟನೆ ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ. ನಿಖಿತಾ (25) ಅನೀಶ್ (9 ತಿಂಗಳು) ಸಾವಿಗೀಡಾದ ತಾಯಿ ಮತ್ತು ಮಗ ಎಂದು ತಿಳಿದುಬಂದಿದೆ.
ಮೃತ ಮಹಿಳೆ ಒಂದು ವರ್ಷದ ಹಿಂದೆ ದಾವಣಗೆರೆ ಮೂಲದ, ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಮನೋಜ್ ಕುಮಾರ್ ಜೊತೆ ವಿವಾಹವಾಗಿದ್ದರು. ನಿನ್ನೆ ಮಹಿಳೆ ಇದ್ದಕ್ಕಿದ್ದಂತೆ ಮಗನೊಂದಿಗೆ ಜಗಳೂರಿನ ಜೆಸಿಆರ್ ಬಡಾವಣೆಯಲ್ಲಿರುವ ತನ್ನ ತವರಿಗೆ ಬಂದಿದ್ದರು. ಇಂದು ಘಟನೆ ಸಂಭವಿಸಿದೆ. ಮೃತಳ ತಂದೆ -ತಾಯಿ ಇಬ್ಬರೂ ಶಿಕ್ಷಕರು. ಬೆಳಿಗ್ಗೆ ಅವರು ಶಾಲೆಗೆ ತೆರಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಗಳೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗಂಡನ ಅಕ್ರಮ ಸಂಬಂಧಕ್ಕೆ ನೊಂದಿದ್ದ ಮಹಿಳೆ: ಮದುವೆಯಾದಾಗಿನಿಂದಲೂ ಮಗಳನ್ನು ನೆಮ್ಮದಿಯಿಂದ ಇರಲು ಬಿಡದೆ ನಿತ್ಯ ಕಿರುಕುಳ ನೀಡುತ್ತಿದ್ದ. ಲಿಖಿತಳನ್ನು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಆರು ಲಕ್ಷ ರೂಪಾಯಿ ವರದಕ್ಷಿಣೆ, ಚಿನ್ನಾಭರಣ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರೂ ಕೂಡ ಮದುವೆಯ ನಂತರ ಆತನ ವರ್ತನೆ ಮತ್ತು ಆತ ಹೊಂದಿದ್ದ ಅಕ್ರಮ ಸಂಬಂಧದಿಂದ ಲಿಖಿತ ಬೇಸತ್ತಿದ್ದಳು ಎಂದು ಪೋಷಕರು ದೂರಿದ್ದಾರೆ.
ನಿತ್ಯ ಫೋನ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಮನೋಜ್, ತನ್ನ ತಾಯಿಯ ಮಾತು ಕೇಳಿ ಇನ್ನು ಹೆಚ್ಚಿನ ಹಣ, ಒಡವೆಗಳನ್ನು ತರುವಂತೆ ಪೀಡಿಸುತ್ತಿದ್ದನಂತೆ.
ಇದನ್ನೂ ಓದಿ: ಜಮೀನು ಬಿಟ್ಟುಕೊಡುವಂತೆ ಬಿಜೆಪಿ ಶಾಸಕರ ಕುಟುಂಬದ ಒತ್ತಡ ಆರೋಪ; ನಾಲ್ವರಿಂದ ವಿಷ ಸೇವನೆ