ETV Bharat / state

ದಾವಣಗೆರೆ: ಮದ್ಯದ ಅಮಲಿನಲ್ಲಿ ಮೈ-ಕೈ, ಕತ್ತು ಕೊಯ್ದುಕೊಂಡಿದ್ದ ವ್ಯಕ್ತಿ ಸಾವು - ಕತ್ತು

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ಅದೇ ಅಮಲಲ್ಲಿ ಬ್ಲೇಡ್​ನಿಂದ ತನ್ನ ದೇಹಕ್ಕೆ ಗಾಯ ಮಾಡಿಕೊಂಡು ಕೊನೆಗೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಬಸವರಾಜಪ್ಪ
ಮೃತ ಬಸವರಾಜಪ್ಪ
author img

By ETV Bharat Karnataka Team

Published : Sep 9, 2023, 9:52 AM IST

ದಾವಣಗೆರೆ: ವ್ಯಕ್ತಿಯೋರ್ವ ಮದ್ಯದ ಅಮಲಿನಲ್ಲಿ ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ಕಳೆದ ದಿನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಬಸವರಾಜ್​ (31) ಕತ್ತು ಕೊಯ್ದುಕೊಂಡು ಮೃತಪಟ್ಟ ವ್ಯಕ್ತಿ.

ಕ್ಷೌರದ ಅಂಗಡಿಯಲ್ಲಿ ಬ್ಲೇಡ್​ ತೆಗೆದುಕೊಂಡು ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಬಸವರಾಜಪ್ಪ,‌ ರಕ್ತ ಸುರಿಯುತ್ತಿದ್ದರು ಬೀದಿ ಬದಿ ತಿರುಗಾಡುತ್ತಿದ್ದುದನ್ನು ಸ್ಥಳೀಯರು ಕಂಡು ತಕ್ಷಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದ್ದರು. ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜಪ್ಪ ಮೃತಪಟ್ಟಿದ್ದಾನೆ. ಬಸವರಾಜ್ ಮೂಲತಃ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದವನು ಎಂದು ತಿಳಿದುಬಂದಿದೆ.

ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದ ಬಸವರಾಜ್​ ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿಯ ತಮ್ಮ ಅಕ್ಕನ ಮನೆಯಲ್ಲಿ ವಾಸವಾಗಿದ್ದನು. ಅತಿಯಾದ ಮದ್ಯ ವ್ಯಸನದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಈತ ನಿನ್ನೆ ಬ್ಲೇಡ್​ನಿಂದ ಕತ್ತು ಮೈ ಕೈಯನ್ನು ಕೊಯ್ದುಕೊಂಡು ಸಾವನ್ನಪ್ಪಿರುವ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಗಿರಿ ಪಿಎಸ್ಐ ಹೇಳಿಕೆ: ಕುಡಿತದ ಚಟಕ್ಕೆ ಜೋತು ಬಿದ್ದಿದ್ದ ಮೃತ ಬಸವರಾಜಪ್ಪ ಭಿಕ್ಷೆ ಬೇಡುತ್ತಾ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿಯ ತಮ್ಮ ಅಕ್ಕನ ಮನೆಯಲ್ಲಿ ವಾಸವಾಗಿದ್ದನು. ಇನ್ನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಬಸವರಾಜಪ್ಪನಿಗೆ ಸಹೋದರಿ ಹಣ ಖರ್ಚು ಮಾಡಿ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡುಸಿದ್ದರು ಏನೂ ಪ್ರಯೋಜನ ಆಗಿರಲಿಲ್ಲ. ಹೀಗೆ ಭಿಕ್ಷೆ ಬೇಡುತ್ತಿದ್ದ ಬಸವರಾಜಪ್ಪ ಕಳೆದ ದಿನ ಚನ್ನಗಿರಿ ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ಕ್ಷೌರದ ಅಂಗಡಿಯಲ್ಲಿ ಸಿಗುವ ರೇಜರ್ ಪಡೆದು ಬೇಕಾಬಿಟ್ಟಿ ಕೈಮೈ ಕತ್ತನ್ನು ಕೊಯ್ದುಕೊಂಡಿದ್ದಾನೆ. ಸ್ಥಳೀಯರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ತೀವ್ರ ರಕ್ತಸ್ರಾವ ಆಗಿದ್ದರಿಂದ ಸಾವನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ಪ್ರಕರಣ- ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ: ಕುಡಿದ ಅಮಲಿನಲ್ಲಿ ಯುವಕ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿತ್ತು. ರವಿಕುಮಾರ್ ಮತ್ತು ಪವನ್​ ಕುಮಾರ್​ ಎಂಬ ಸ್ನೇಹಿತರಿಬ್ಬರು ರವಿಕುಮಾರ್​ನ ಮನೆಯ ಮೇಲಿನ ಮಾಳಿಗೆಯಲ್ಲಿ ಮದ್ಯ ಸೇವಿಸಿದ್ದರು. ನಂತರ ಇವರಿಬ್ಬರ ನಡುವೆ ಕ್ಷುಲ್ಲಕ್ಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಅಮಲಿನಲ್ಲಿ ಪವನ್​ಕುಮಾರ್​ ತನ್ನ ಸ್ನೇಹಿತ ರವಿಕುಮಾರ್​ನನ್ನು ಹತ್ಯೆ ಮಾಡಿದ್ದ.

ಇದನ್ನೂ ಓದಿ: ಸರ್ವೀಸ್​ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಬಿಎಸ್​ಎಫ್​ ಯೋಧ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.