ETV Bharat / state

ಗೋಡೆ ಕುಸಿದು ಬಿದ್ದು ಹೆಣ್ಣು ಮಗು ಸಾವು: ಸ್ಪೂರ್ತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ ಜಿಲ್ಲಾಧಿಕಾರಿ

author img

By

Published : Jul 25, 2023, 8:54 PM IST

ದಾವಣಗೆರೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಇಲ್ಲಿನ ಕುಂಬಳೂರು ಗ್ರಾಮದಲ್ಲಿ ಸಂಭವಿಸಿದ್ದ ಅವಘಡದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಡಿಸಿ ಪರಿಹಾರ ನೀಡಿದ್ದಾರೆ.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮೃತಪಟ್ಟ ಮಗುವಿನ ಮನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿದ್ದಾರೆ. ಅಲ್ಲದೇ ಈ ಮೂಲಕ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಿದ್ದಾರೆ.

ಅವಘಡ ಸಂಭವಿಸಿದ ಮನೆಗೆ ಆಗಮಿಸಿದ ಡಿಸಿ ಶಿವಾನಂದ ಕಾಪಶಿ

ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿರುವ ಬೆನ್ನಲ್ಲೇ ಇಂದು ಬೆಳಗಿನ ಜಾವ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಸ್ಪೂರ್ತಿ (01) ಸಾವನಪ್ಪಿ ತಂದೆ ಕೆಂಚಪ್ಪ (32) ಗಾಯಗೊಂಡಿದ್ದರು. ಅವರಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ಮೂರು‌ ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಬೀಳುತ್ತಿರುವ ಬೆನ್ನಲ್ಲೇ ಈ ಘಟನೆ ಜರುಗಿದೆ.

ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಗಾಯಗೊಂಡ ಕೆಂಚಪ್ಪಗೆ ಸೇರಿದ ಮನೆ ಸಂಪೂರ್ಣವಾಗಿ ಹಾಳಾಗಿತ್ತು.‌ ಗೋಡೆಗಳು ಕೂಡ ಬಿರುಕು ಬಿಟ್ಟಿದ್ದವು. ಮಳೆ ಬೀಳ್ತಿರುವುದರಿಂದ ಎಲ್ಲ ಗೋಡೆಗಳು ಹಸಿಯಾಗಿ ಕುಸಿದಿವೆ. ಇದರಿಂದ ಅವಘಡ ಸಂಭವಿಸಿದೆ. ಕಳೆದ ದಿನ ಮಳೆ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮ ವಹಿಸದ ಕೆಂಚಪ್ಪ ಕುಟುಂಬ ರಾತ್ರಿ ವೇಳೆ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾರೆ.

ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ ಗ್ರಾಮಕ್ಕೆ ಭೇಟಿ ನೀಡಿದ  ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಕೆಂಚಪ್ಪ ಮಗು ಸ್ಪೂರ್ತಿ ಹಾಗೂ‌ ಪತ್ನಿ ಲಕ್ಷ್ಮಿ ಮಲಗಿಕೊಂಡ ವೇಳೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಯ ಗೋಡೆ ಕುಸಿದು ಬಿದ್ದು ಪುಟ್ಟ ಬಾಲಕಿ ಸ್ಪೂರ್ತಿಯನ್ನು ಬಲಿ ಪಡೆದಿದ್ದು, ತಂದೆ ತಾಯಿ ಇಬ್ಬರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಈ ಘಟನೆ ಹರಿಹರ ತಾಲೂಕಿನ ಮಲೇಬೆನ್ನೂರು‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿತ್ತು.‌

ಉಕ್ಕಡಗಾತ್ರಿ, ಪತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ಜಿಲ್ಲಾಧಿಕಾರಿ ಭೇಟಿ: ತುಂಗಾಭದ್ರ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ, ಪತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅತಿಯಾದ ಮಳೆಯಿಂದಾಗಿ ಹರಿಹರ ತಾಲೂಕಿನ ತಿಮ್ಮಿನಕಟ್ಟೆ ಗ್ರಾಮದಲ್ಲಿ ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ಮಳೆಹಾನಿ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹರಿಹರ ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ, ಮಲೆಬೆನ್ನೂರು ಉಪತಹಶೀಲ್ದಾರ್ ರವಿ ಜಿಲ್ಲಾಧಿಕಾರಿಗೆ ಸಾಥ್​ ನೀಡಿದ್ರು.‌

ಮಳೆ ವಿವರ : ಜಿಲ್ಲೆಯಲ್ಲಿ ಜುಲೈ 23 ರಿಂದ 25 ತನಕ ಜಿಲ್ಲೆಯಲ್ಲಿ 11.4 ಮಿ.ಮೀ. ಸರಾಸರಿ ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು11.38 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಜಿಲ್ಲೆಯ ಚನ್ನಗಿರಿಯಲ್ಲಿ ವಾಡಿಕೆ ಮಳೆ 7.1 ಮಿ.ಮೀ ಆಗಿದ್ದು, 14.8 ಮಿ.ಮೀನಷ್ಟು ಮಳೆಯಾಗ್ಬೇಕಿತ್ತು.‌ ದಾವಣಗೆರೆ ತಾಲೂಕಿನಲ್ಲೂ ಕೂಡ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ವಾಡಿಕೆ ಮಳೆ 1.5 ಮಿ.ಮೀ ಆಗಿದ್ದು, 6.0 ಮಿ.ಮೀ, ಮಳೆಯಾಗ್ಬೇಕಿತ್ತು. ಹರಿಹರ ತಾಲೂಕಿನಲ್ಲಿ ವಾಡಿಕೆ ಮಳೆ 1.9 ಮಿ.ಮೀ ಆಗಿದ್ದು, ವಾಸ್ತವ ಮಳೆ 4.4 ಮಿ.ಮೀ ಆಗಬೇಕಾಗಿದೆ.

ಇನ್ನು ಹೊನ್ನಾಳಿಯಲ್ಲಿ ನೋಡುವುದಾದರೆ ವಾಡಿಕೆ ಮಳೆ 3.8 ಮಿ.ಮೀ ಆಗಿದೆ. 10.8 ಮಿ.ಮೀ, ಮಳೆಯಾಗ್ಬೇಕಿತ್ತು. ಇತ್ತಾ ಜಗಳೂರು ತಾಲೂಕಿನಲ್ಲಿ ವಾಡಿಕೆ ಮಳೆ 2.3 ಮಿ.ಮೀ ಆಗಿದ್ದು, 12.7 ಮಿ.ಮೀ ಆಗ್ಬೇಕಾಗಿದೆ. ನ್ಯಾಮತಿಯಲ್ಲಿ ವಾಡಿಕೆ ಮಳೆ 5.7 ಮಿ.ಮೀ ಹಾಗೂ ವಾಸ್ತವ ಮಳೆ 20.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದಿಂದ ಪ್ರಕಟಣೆ ನೀಡಲಾಗಿದೆ.

ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ಎಷ್ಟು: ದಾವಣಗೆರೆ ತಾಲೂಕಿನಲ್ಲಿ ಇಲ್ಲಿ ತನಕ ಒಟ್ಟು 9 ಮನೆಗಳು ಮಳೆಯಿಂದ ಹಾನಿಯಾಗಿದ್ದರಿಂದ ಒಟ್ಟು 2.70 ಲಕ್ಷ ನಷ್ಟ ಸಂಭವಿಸಿದೆ. ಹರಿಹರ ತಾಲೂಕಿನಲ್ಲಿ ಎರಡು ಮನೆಗಳು ಹಾನಿಯಾಗಿದ್ದು, ಕುಂಬಳೂರಿನಲ್ಲಿ ಮಗು ಸಾವನ್ನಪ್ಪಿದ್ದರಿಂದ ವಾರಸುದಾರರಿಗೆ 5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಡಳಿತದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಲ್ಲದೇ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಎರಡು ಮನೆಗಳು ಭಾಗಶಃ ಹಾನಿಯಾಗಿದ್ದು, ಹೊನ್ನಾಳಿ ತಾಲೂಕಿನ ಒಂದು ಮನೆ ಭಾಗಶಃ ಹಾನಿಯಾಗಿರುವುದು ವರದಿಯಾಗಿದೆ. ನ್ಯಾಮತಿ ತಾಲೂಕಿನಲ್ಲಿ ತಲಾ ಒಂದು ಮನೆ ಭಾಗಶಃ ಹಾನಿಯಾಗಿದೆ. ಒಟ್ಟು ಜಿಲ್ಲೆಯಲ್ಲಿ 11.38 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಈ ಎಲ್ಲಾ ನಷ್ಟಕ್ಕೆ ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿತ, ಕಾರ್​ಗಳು ಜಖಂ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.