ದಾವಣಗೆರೆ : ಕೌಟುಂಬಿಕ ಕಲಹದ ಹಿನ್ನೆಲೆ ಹೆತ್ತ ಮಗಳಿಗೆ ವಿಷಹಾಕಿ ಬಳಿಕ ತಂದೆ ಕೂಡ ನೇಣಿಗೆ ಶರಣಾಗಿರುವ ಘಟನೆ ನಿಟುವಳ್ಳಿಯಲ್ಲಿ ನಡೆದಿದೆ.
ಜಯಂತ್ (30), ಮಾನಸ (3) ಸಾವನ್ನಪ್ಪಿದ ದುರ್ದೈವಿಗಳು. ಜಯಂತ್ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕೈದು ದಿನಗಳಿಂದ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಎರಡು ದಿನಗಳ ಹಿಂದೆ ಜಯಂತ್ ಪತ್ನಿ ತವರು ಮನೆಗೆ ಹೋಗಿ ಬಂದಿದ್ದಳು ಎನ್ನಲಾಗುತ್ತಿದೆ.
ಇಂದು ಜಯಂತ್ ಪತ್ನಿ ಶಾಲೆಗೆ ಹೋಗಿದ್ದಾಗ ಮಗಳಿಗೆ ವಿಷ ಕುಡಿಸಿ, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಜಯಂತ್ ಪತ್ನಿ ಮಗಳು ಮತ್ತು ಪತಿ ಶವ ಕಂಡು ಕಂಗಾಲಾಗಿದ್ದಾಳೆ.
ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.