ETV Bharat / state

ದಾವಣಗೆರೆಯಲ್ಲಿ 52 ಮಂದಿಯಲ್ಲಿ ಕೊರೊನಾ ಪಾಸಿಟಿವ್​ ದೃಢ - ದಾವಣಗೆರೆ ಕೊರೊನಾ ಸುದ್ದಿ

ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಈ ದಿನದ ಕೊರೊನಾ ಸೋಂಕಿನ ಸಂಪೂರ್ಣ ವರದಿ ಇಲ್ಲಿದೆ.

corona
ಕೊರೊನಾ
author img

By

Published : Oct 24, 2020, 9:12 PM IST

ಶಿವಮೊಗ್ಗ/ದಾವಣಗೆರೆ: ಜಿಲ್ಲೆಯಲ್ಲಿ 335 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಒಟ್ಟು 19,184 ಮಂದಿ ಈವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಹೊಸದಾಗಿ 52 ಮಂದಿಯಲ್ಲಿ‌ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 20,286ಕ್ಕೇರಿದೆ. ದಾವಣಗೆರೆ 24, ಹರಿಹರ 8, ಚನ್ನಗಿರಿ 8, ಹೊನ್ನಾಳಿಯ 12 ಮಂದಿಗೆ ಸೋಂಕು ತಗುಲಿದೆ.

ಬಿಡುಗಡೆಯಾದವರ ವಿವರ: ದಾವಣಗೆರೆ 136, ಹರಿಹರ 81, ಜಗಳೂರು 15, ಚನ್ನಗಿರಿ 43, ಹೊನ್ನಾಳಿ 57 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಮೂವರು ಕೊರೊನಾದಿಂದ ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಕೊರೊನಾಕ್ಕೆ 253 ಮಂದಿ ಬಲಿಯಾಗಿದ್ದಾರೆ‌.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 59 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ18,878 ಕ್ಕೆ ಏರಿಕೆಯಾಗಿದೆ. ಇಂದು 122 ಜನ ಗುಣಮುಖರಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಇದುವರೆಗೂ 17,821 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 1 ಸಾವು ಸಂಭವಿಸಿದೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 732 ಜನ ಚಿಕಿತ್ಸೆಯಲ್ಲಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 137 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 07 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 86 ಜನ ಇದ್ದಾರೆ. ಮನೆಯಲ್ಲಿ 488 ಜನ ಐಸೋಲೇಷನ್ ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 15 ಸೋಂಕಿತರಿದ್ದಾರೆ.

ತಾಲೂಕುವಾರು ಸೋಂಕಿತರ ಸಂಖ್ಯೆ: ಶಿವಮೊಗ್ಗ-25, ಭದ್ರಾವತಿ-17, ಶಿಕಾರಿಪುರ-04, ತೀರ್ಥಹಳ್ಳಿ-01, ಸೊರಬ-06, ಸಾಗರ-04, ಹೊಸನಗರ- 02 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.