ETV Bharat / state

ಜಗಳೂರಿಗೆ ಬಂದ ಹೊರ ರಾಜ್ಯಗಳ 30 ಮಂದಿ: ಆತಂಕದಲ್ಲಿ ಸ್ಥಳೀಯರು

author img

By

Published : Mar 24, 2020, 6:14 PM IST

ಜಗಳೂರಿನ ಸೋಲಾರ್ ಪ್ಲ್ಯಾಂಟ್​ನಲ್ಲಿ ಕೆಲಸ ಮಾಡಲು ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರದಿಂದ 30 ಜನರು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

davangere
ಆತಂಕದಲ್ಲಿ ಜಗಳೂರಿನ ಸ್ಥಳೀಯರು

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಸಿದ್ದಮ್ಮನ ಹಳ್ಳಿಗೆ ಹೊರ ರಾಜ್ಯದ 30 ಮಂದಿ ಆಗಮಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಜಗಳೂರಿನ ಸೋಲಾರ್ ಪ್ಲ್ಯಾಂಟ್​ನಲ್ಲಿ ಕೆಲಸ ಮಾಡಲು ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರದಿಂದ 30 ಜನರು ಬಂದಿದ್ದಾರೆ. ಕೊರೊನಾ ಭೀತಿ ನಡುವೆಯೂ ಇಲ್ಲಿಗೆ 30 ಮಂದಿ ಬಂದಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚುವಂತೆ ಮಾಡಿದೆ. ಇನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಹೊರ ರಾಜ್ಯಗಳಿಂದ ಬಂದವರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಯಾರಿಗೂ ಈ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಇದೀಗ ಸ್ಥಳೀಯರು ಇವರ ಬಗ್ಗೆ ನಿಗಾ ವಹಿಸಬೇಕೆಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಸಿದ್ದಮ್ಮನ ಹಳ್ಳಿಗೆ ಬಂದ ಹೊರ ರಾಜ್ಯಗಳ 30 ಮಂದಿ: ಸ್ಥಳೀಯರಲ್ಲಿ ಆತಂಕ

ಇಲ್ಲಿಗೆ ಇತರೆ ರಾಜ್ಯಗಳಿಂದ ಜನರು ಬರುವುದು, ಹೋಗುವುದು ಸಾಮಾನ್ಯವಾಗಿದೆ. ಕೊರೊನಾ ಭೀತಿ ಹೋಗುವವರೆಗೂ ಇಲ್ಲಿ ಕೆಲಸ ಸ್ಥಗಿತ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.