ಮಂಗಳೂರು: ಪ್ರಪಂಚವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಕೊರೊನಾ ಮಹಾಮಾರಿ ಸೋಂಕಿನಿಂದ ಮುಕ್ತಿ ಪಡೆಯಲು ಹಾಗೂ ಪ್ರಧಾನಿ ಮೋದಿಯವರ ಬಲವರ್ಧನೆಗಾಗಿ ಯುವಕರ ತಂಡವೊಂದು ಶ್ರೀಕ್ಷೇತ್ರ ಕಟೀಲಿಗೆ ಪಾದಯಾತ್ರೆ ಮಾಡಿದ್ದಾರೆ.
ಕೀರ್ತನ್, ಮೃಣಾಲ್ ಶೆಟ್ಟಿ, ಕೃತೇಶ್ ಭಂಡಾರಿ, ಕಿರಣ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸನತ್ ಹಾಗೂ ವಿಖ್ಯಾತ್ ಎಂಬ ಈ ಏಳು ಜನ ಯುವಕರ ತಂಡ ವಿಶಿಷ್ಟವಾಗಿ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಜನರನ್ನು ಪಾರು ಮಾಡುವಂತೆ ಕಟೀಲು ಶ್ರೀ ಭ್ರಮರಾಂಭಿಕೆಯ ಮೊರೆ ಹೋಗಿದ್ದಾರೆ.
ನಿನ್ನೆ ಮುಂಜಾನೆ 4.15 ಕ್ಕೆ ನಗರದ ಕಾವೂರಿನಿಂದ ಪಾದಯಾತ್ರೆ ಬೆಳೆಸಿದ ತಂಡ ಬೆಳಗ್ಗೆ 7.50 ರ ಸುಮಾರಿಗೆ ಕಟೀಲು ದೇಗುಲ ತಲುಪಿದೆ. ಅಲ್ಲಿ ದೇವಿಯ ದರ್ಶನ ಪಡೆದ ಯುವಕರು, ಕೊರೊನಾ ಸೋಂಕಿನಿಂದ ಜಗತ್ತನ್ನು ಕಾಪಾಡುವಂತೆ ಪ್ರಾರ್ಥನೆ ಮಾಡಿದ್ದಾರೆ.