ETV Bharat / state

ಪುತ್ತೂರು: ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿದು ಕೊಲೆ.. ಪ್ರಕರಣ ದಾಖಲು

ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಗೆ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ - ಪೋಷಕರೊಂದಿಗೆ ಜಗಳ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು.

author img

By

Published : Jan 17, 2023, 4:16 PM IST

Updated : Jan 17, 2023, 4:44 PM IST

young woman was stabbed to death at home
ಪುತ್ತೂರು:ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿದು ಕೊಲೆ

ಪುತ್ತೂರು:ತಾಲೂಕಿನ ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಗೆ ವ್ಯಕ್ತಿಯೊಬ್ಬ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಜ.17ರಂದು ಮನೆಯಂಗಳದಲ್ಲೇ ನಡೆದಿದೆ. ಜಯಶ್ರೀ (23) ಮೃತಪಟ್ಟ ಯುವತಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಯುವತಿ ಮನೆಯಲ್ಲಿ ಅಡುಗೆ ಕೆಲಸ ಮಾಡಿತ್ತಿದ್ದಳು, ಈ ವೇಳೆ ಜೋರಾಗಿ ಚೀರಿಕೊಂಡಾಗ ತಾಯಿ ಓಡಿ ಬಂದು ನೋಡಿದ್ದಾರೆ. ಆದರೆ ಮಗಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡಿದ್ದಾರೆ. ಕೊಡಲೇ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಚೂರಿ ಇರಿತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಮೃತ ದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ.

ಪೋಷಕರೊಂದಿಗೆ ಜಗಳ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು( ದೊಡ್ಡಬಳ್ಳಾಪುರ): ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹಣದ ವಿಚಾರವಾಗಿ ಹೆತ್ತವರೊಂದಿಗೆ ಜಗಳವಾಡಿದ ಯುವಕ ಆತ್ಮ ಹತ್ಯೆಗೆ ಯತ್ನಿಸಿದ್ದಾಗ ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದಾರೆ. ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣ ಮುಂಭಾಗದಲ್ಲಿನ ಸರ್ಕಾರಿ ಶಾಲೆ ಆವರಣದಲ್ಲಿ ಈ ಘಟನೆ ನಡೆದಿದೆ. ನಾಗೇಂದ್ರ ಪ್ರಸಾದ್ (29) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ಮೃತ ಯುವಕ ಕರನೇಹಳ್ಳಿಯ ನಿವಾಸಿಯಾಗಿದ್ದು, ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ.

ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ನಾಗೇಂದ್ರ ಪ್ರಸಾದ್ ಕೂಲಿ ಹಣವನ್ನ ಮನೆಯವರಿಗೆ ಕೊಡುತ್ತಿರಲಿಲ್ಲ, ಕೂಲಿಯಿಂದ ಬಂದ ಹಣವನ್ನ ಸಿನಿಮಾ ನೋಡುವುದಕ್ಕೆ ಖರ್ಚು ಮಾಡುತ್ತಿದ್ದ, ಇದೇ ವಿಚಾರಕ್ಕೆ ಪೋಷಕರೊಂದಿಗೆ ಹಾಗಾಗಿ ಜಗಳವಾಗುತ್ತಿತ್ತು. ನಿನ್ನೆ ಸಹ ಇದೇ ವಿಚಾರಕ್ಕೆ ಜಗಳವಾಗಿದ್ದು, ಇದರಿಂದ ಮನನೊಂದ ಯುವಕ ಆತ್ಮಹತ್ಯಗೆ ಯತ್ನಿಸಿದ್ದಾನೆ.

ನಿನ್ನೆ ಸಂಜೆಯ ಸುಮಾರಿಗೆ ಭಗತ್ ಸಿಂಗ್ ಕ್ರೀಡಾಂಗಣ ಮುಂಭಾಗದಲ್ಲಿನ ಸರ್ಕಾರಿ ಶಾಲೆಯ ಆವರಣಕ್ಕೆ ಬಂದು ಆತ್ಮ ಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ರಸ್ತೆ ಬದಿ ನಿಂತು ಸೆಲ್ಫಿ: ಎಸ್​ಯುವಿ ಕಾರು ಡಿಕ್ಕಿಯಾಗಿ ಇಬ್ಬರು ಸಾವು

ಹೂವಿನ ಅಂಗಡಿಯಲ್ಲಿ 9 ಲಕ್ಷ ಕಳವು ಮಾಡಿದ ಕಳ್ಳ ಸೆರೆ(ಮಂಗಳೂರು): ಮತ್ತೊಂದೆಡೆ, ಕಳೆದ ವರ್ಷದ ನವೆಂಬರ್​ನಲ್ಲಿ ಹೂವಿನ ಅಂಗಡಿಯೊಂದರಲ್ಲಿ 9 ಲಕ್ಷ ರೂ ಹಣ ಕದ್ದು ಪರಾರಿಯಾಗಿದ್ದ ಕಳ್ಳನ್ನು ಮಂಗಳೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ ಕುಂಞಮೋನು ಜಾಫರ್ (48) ಬಂಧಿತ ಆರೋಪಿ. ಆರೋಪಿ ಹಮೀದ್ ಕುಂಞಮೋನು ಜಾಫರ್ ಕಳೆದ ನವೆಂಬರ್​ನಲ್ಲಿ ನಗರದ ಕೆಎಸ್ ರಾವ್ ರಸ್ತೆಯ ಬಳಿಯ ಹೂವಿನ ಅಂಗಡಿಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ. ಹೂವಿನ ಅಂಗಡಿಯಲ್ಲಿ 9 ಲಕ್ಷ ರೂ ಹಣವನ್ನು ಕಳವು ಮಾಡಿದ್ದ ಆರೋಪಿ ಹಮೀದ್, ಆ ಹಣದಲ್ಲಿ ಸ್ವಲ್ಪ ಬಳಸಿಕೊಂಡು ಉಳಿದ ಹಣವನ್ನು ನಗರದ ಪಾಳು ಬಿದ್ದ ಕಟ್ಟಡವೊಂದರ ಬಳಿ ನೆಲದಲ್ಲಿ ಹೂತಿಟ್ಟು ಬಳಿಕ ಪರಾರಿಯಾಗಿದ್ದ.

Last Updated : Jan 17, 2023, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.