ಉಳ್ಳಾಲ: ಯುವತಿಯೋರ್ವಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿರುವ ಘಟನೆ ಕುಂಪಲ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
20 ವರ್ಷದ ಯುವತಿ ಪ್ರೇಕ್ಷಾ ಮಂಗಳೂರಿನ ಖಾಸಗಿ ಕಾಲೆಜೊಂದರಲ್ಲಿ ಓದುತ್ತಿದ್ದು ರಜೆ ಪಡೆದುಕೊಂಡು ಮನೆಯಲ್ಲಿದ್ದಳು. ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನದ ವೇಳೆ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಕೋಣೆಯೊಳಗೆ ಮಗಳು ಸಾವನ್ನಪ್ಪಿರುವುದು ಗೊತ್ತಾಗಿದೆ.
ಯುವತಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭ ಮನೆಗೆ ಮೂವರು ವ್ಯಕ್ತಿಗಳು ಬಂದಿದ್ದರಂತೆ. ಯುವತಿ ಇಂದು ಬೆಂಗಳೂರಿಗೆ ಫೋಟೋ ಶೂಟ್ಗೆ ತೆರಳಬೇಕಿತ್ತಂತೆ. ಇದನ್ನು ಆಕೆಯ ಗೆಳೆಯರೇ ಆಗಿರುವ ಮೂವರ ಪೈಕಿ ಓರ್ವ ವಿರೋಧಿಸಿದ್ದನಂತೆ. ಇದೇ ಸಂಬಂಧ ಸಾವು ಸಂಭವಿಸಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.