ಮಂಗಳೂರು; ಮಾಸ್ಕ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಮಂಗಳೂರಿನ ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಲ್ಲೂರು ಗ್ರಾಮ ಪಂಚಾಯತ್ನ ಪಿಡಿಒ ರಾಜೇಂದ್ರ ಶೆಟ್ಟಿ ಅವರು ಮಲ್ಲೂರು ಬಳಿ ಬದ್ರಿಯಾನಗರದ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕಲು ಸೂಚಿಸಿದ್ದರು.
ಬಳಿಕ ಇದೇ ಯುವಕರು ಮಲ್ಲೂರು ಗ್ರಾಮ ಪಂಚಾಯತ್ ಆವರಣದಲ್ಲಿ ಸೇರಿದ್ದು, ಅಲ್ಲಿಯೂ ಅವರು ಮಾಸ್ಕ್ ಹಾಕದೇ ಗುಂಪು - ಗುಂಪಾಗಿದ್ದನ್ನು ಪ್ರಶ್ನಿಸಿದರು. ಈ ವೇಳೆ, ಯುವಕರಿಬ್ಬರು ಪಿಡಿಒ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.