ಕಡಬ (ದ.ಕನ್ನಡ): ಅನ್ಯ ಕೋಮಿನ ವ್ಯಕ್ತಿಯೋರ್ವ ಜ್ಯೂಸ್ ಸೆಂಟರ್ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೊ ತೆಗೆದಿರುವ ಘಟನೆ ನಗರದಲ್ಲಿ ನಡೆದಿದೆ.
ಅನ್ಯಕೋಮಿನ ವ್ಯಕ್ತಿ ಜ್ಯೂಸ್ ಸೆಂಟರ್ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ತನ್ನ ವಾಟ್ಸಪ್ ನಲ್ಲಿ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಕಡಬದ ಹಿಂದೂ ಸಂಘಟನೆಯ ಕಾರ್ಯಕರ್ತರು ಜೂಸ್ ಸೆಂಟರ್ ಮುಂದೆ ಜಮಾಯಿಸಿದ್ದಾರೆ.
ಓದಿ: ಅಂಚೆ ಮತದಾನ ಬಹಿರಂಗ: ತಮ್ಮ ಪರವಾಗಿ ಮತ ಹಾಕದ ಶಿಕ್ಷಕನ ಮೇಲೆ ಹಲ್ಲೆ
ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.