ETV Bharat / state

ಕೊಂಚ ಬಿಡುವು ನೀಡಿದ್ದ ಮಳೆರಾಯ ಮತ್ತೆ ಶುರು; ಕರಾವಳಿಯಲ್ಲಿ ಯೆಲ್ಲೋ​ ಅಲರ್ಟ್​...

ಕರಾವಳಿಯಲ್ಲಿ ಕೊಂಚ ಬಿಡುವು ನೀಡಿದ್ದ ಮಳೆರಾಯ ಸಂಜೆಯಿಂದ ಮತ್ತೆ ಸುರಿಯಲು ಶುರು ಮಾಡಿದ್ಧಾನೆ. ಹವಾಮಾನ ಇಲಾಖೆ ಆ.19ವರೆಗೆ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್​ ಘೋಷಿಸಿದೆ.

Rain
ಮಳೆ
author img

By

Published : Aug 17, 2020, 8:26 PM IST

ಮಂಗಳೂರು: ಕೊಂಚ ಕಾಲ ಬಿಡುವು ಪಡೆದಿದ್ದ ಮಳೆ ಮತ್ತೆ ಸುರಿಯಲು‌ ಆರಂಭಿಸಿದ್ದು, ಸೋಮವಾರ ಸಂಜೆ ಬಿರುಸಿನ ಮಳೆ ಸುರಿದಿದೆ.

ಕರಾವಳಿಯಲ್ಲಿ ವಿವಿಧೆಡೆ ಮತ್ತೆ ಮಳೆ

ಭಾರತೀಯ ಹವಾಮಾನ ಇಲಾಖೆ ಇಂದಿನಿಂದ ಆ. 19ರವರೆಗೆ ಯೆಲ್ಲೋ​‌ ಅಲರ್ಟ್ ಘೋಷಣೆ ಮಾಡಿದೆ. ನಿನ್ನೆ ಬೆಳಗ್ಗೆ ಬಿಸಿಲಿನ ವಾತಾವರಣ ಕಂಡು ಬಂದರೂ, ಮಧ್ಯಾಹ್ನದ ಬಳಿಕ ಅಲ್ಲಲ್ಲಿ ಕೆಲವೆಡೆ ಮಳೆ ಸುರಿದಿದೆ.‌

ಕಳೆದ 24 ಗಂಟೆಗಳಲ್ಲಿ ಮಂಗಳೂರಿನಲ್ಲಿ 24.0 ಮಿ.ಮೀ ಮಳೆ ಸುರಿದಿದ್ದು, ಬೆಳ್ತಂಗಡಿಯಲ್ಲಿ 69.0 ಮಿ.ಮೀ., ಬಂಟ್ವಾಳದಲ್ಲಿ 28.0, ಪುತ್ತೂರಿನಲ್ಲಿ 16.0, ಸುಳ್ಯದಲ್ಲಿ 21.0, ಮೂಡುಬಿದಿರೆ 61.0, ಕಡಬದಲ್ಲಿ 38.0 ಮಿ.ಮೀ ಮಳೆ ಸುರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.