ETV Bharat / state

ಯಕ್ಷರಂಗದ ದಿಗ್ಗಜ ಬೊಟ್ಟಿಕೆರೆ ಪೂಂಜ ಲಾಕ್​​ಡೌನ್​​ ಸದುಪಯೋಗ ಮಾಡಿಕೊಳ್ತಿರೋದು ಹೀಗೆ!

ಯಕ್ಷರಂಗದ 'ಅಭಿನವ ವಾಲ್ಮೀಕಿ' ಎಂದೇ ಪ್ರಖ್ಯಾತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಭಾಗವತರು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ವಿಶಿಷ್ಟ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

Bottikere  Ponjaru
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
author img

By

Published : May 2, 2020, 8:04 PM IST

Updated : May 2, 2020, 9:44 PM IST

ಮಂಗಳೂರು: ರಾತ್ರಿ ಪೂರಾ ನಿದ್ದೆಗೆಟ್ಟು ತಿರುಗಾಟ ಮಾಡುತ್ತಿದ್ದ ಯಕ್ಷಗಾನ ಕಲಾವಿದರು ಇದೀಗ ಲಾಕ್​​​ಡೌನ್ ಪರಿಣಾಮ ಮನೆಯಲ್ಲಿಯೇ ಇದ್ದಾರೆ. ಎಲ್ಲ ಕಲಾವಿದರು ಅನುಕೂಲಕ್ಕೆ ತಕ್ಕಂತೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಯಕ್ಷರಂಗದ 'ಅಭಿನವ ವಾಲ್ಮೀಕಿ' ಎಂದೇ ಪ್ರಖ್ಯಾತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಭಾಗವತರು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ವಿಶಿಷ್ಟ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಕಟೀಲು ಮೇಳದಲ್ಲಿ ನಿರಂತರ 28 ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇದೀಗ ಮಂಗಳೂರಿನ ಹೊರವಲಯದ ಅಸೈಗೋಳಿ ಸಮೀಪದ ಬೊಟ್ಟಿಕೆರೆಯಲ್ಲಿರುವ ತಮ್ಮ ಮನೆ 'ಅಂಬುರುಹ'ದಲ್ಲಿ ಮಡದಿ, ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಲಾಕ್​​ಡೌನ್​ ಅನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ತಮ್ಮ ಮಕ್ಕಳು ಹಾಗೂ ಮನೆಯಲ್ಲಿಯೇ ಇರುವ ಶಿಷ್ಯರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ

ಲಾಕ್ ಡೌನ್ ಬಳಿಕ ಮನೆಯಲ್ಲಿಯೇ ಇದ್ದ ಪೂಂಜ ಅವರ ಮಕ್ಕಳಾದ ಜೀವಿತೇಶ್ ಪೂಂಜ ಮತ್ತು ಪರೀಕ್ಷಿತ್ ಪೂಂಜ, ಬೊಟ್ಟಿಕೆರೆ ಭಾಗವತರ ಶಿಷ್ಯರುಗಳಾದ ಯಕ್ಷ ಉತ್ಸಾಹಿ, ಉಪನ್ಯಾಸಕ ದೀವಿತ್ ಕೋಟ್ಯಾನ್, ಯುವ ಚಂಡೆ, ಮದ್ದಳೆಗಾರರಾದ ಮಯೂರ್ ನಾಯ್ಗ ಮತ್ತು ಕೀರ್ತನ್ ನಾಯ್ಗ ಹಾಗೂ ಕೌಶಿಕ್ ಮಂಜನಾಡಿ ಸೇರಿಕೊಂಡು ಬೊಟ್ಟಿಕೆರೆಯವರ ಮಾರ್ಗದರ್ಶನದಲ್ಲಿ 'ಅಂಬುರುಹ' ಮನೆಯ ಅಂಗಳದಲ್ಲಿ 'ಕೃಷ್ಣ ಕೀರ್ತನಾ' (ಪುರಂದರ ದಾಸರ ಕೃಷ್ಣಮೂರ್ತಿ ಆರಭಿ ರಾಗದ ಕೃತಿ) ಎಂಬ ಯಕ್ಷಗಾನವೂ, ಭರತನಾಟ್ಯವೂ ಮಿಶ್ರಿತ ಹೊಸ ನಾಟ್ಯ ಪ್ರಯೋಗವನ್ನು ಮಾಡಿದ್ದಾರೆ.

ಫೇಸ್​​​​ಬುಕ್​​ನಲ್ಲಿ ವಿಡಿಯೋಗೆ ಭಾರಿ ಪ್ರತಿಕ್ರಿಯೆ:

ಈ ನಾಟ್ಯ ಪ್ರಯೋಗದ ವಿಡಿಯೋ ಚಿತ್ರೀಕರಿಸಿ ಏಪ್ರಿಲ್ 2ರಂದು ಫೇಸ್​​ಬುಕ್​​​ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಬಹಳಷ್ಟು ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೆ ಸಾಕಷ್ಟು ಲೈಕ್, ಶೇರ್, ಕಮೆಂಟ್​​​ಗಳು ಬಂದಿವೆ. ಇಲ್ಲಿಯವರೆಗೆ 'ಕೃಷ್ಣ ಕೀರ್ತನಾ'ವನ್ನು 19 ಸಾವಿರ ಮಂದಿ ವೀಕ್ಷಿಸಿದ್ದು, ಇದರಿಂದ ಪ್ರೇರಣೆಗೊಂಡು ಬಳಿಕ ಸರಸ್ವತಿ ಸ್ತುತಿ, ವಿನಾಯಕ ವೈಭವ, ದೇವಿ ಧ್ಯಾನ, ಕರುಣಾಬ್ಧಿರಾಮ, ಸ್ಕಂದ ಸ್ತುತಿ, ಗಣಪತಿ ಕೌತುಕ, ದಶಾವತಾರ, ರಂಗರಾಗ ಎಂಬ ಒಂಭತ್ತು ಪ್ರಯೋಗಗಳನ್ನು ತಮ್ಮ 'ಅಂಬುರಹ' ಮನೆಯ ಅಂಗಳದಲ್ಲಿ ಚಿತ್ರೀಕರಿಸಿ ಫೇಸ್​​ಬುಕ್​ಗೆ ಅಪ್ಲೋಡ್ ಮಾಡಲಾಗಿದೆ. ಎಲ್ಲವನ್ನೂ ಸಾವಿರಾರು ಮಂದಿ ನೋಡಿ ಆನಂದಿಸಿದ್ದಾರೆ.

ಇಂತಹ ಪ್ರಯೋಗ ಸಾಕಷ್ಟು ಭರತನಾಟ್ಯ, ಯಕ್ಷಗಾನ ವಿದ್ಯಾರ್ಥಿಗಳಿಗೆ ಕಲಿಕೆಯ ಮಾರ್ಗವೂ ಆಗಿದೆ‌. ಅಲ್ಲದೇ ಯಾರೂ ಹೊರಗಿನ ಕಲಾವಿದರನ್ನು ಕರೆಸದೇ, ಮನೆಯಲ್ಲಿ ಇದ್ದವರೇ ಸಾಮಾಜಿಕ ಅಂತರ ಕಾಯ್ದುಕೊಂಡು, ಲಾಕ್​​ಡೌನ್ ಉಲ್ಲಂಘನೆ ಮಾಡದೇ ತಮ್ಮ ಸಮಯವನ್ನು ಸದ್ವಿನಿಯೋಗಗೊಳಿಸಿರೋದು ವಿಶೇಷವಾಗಿದೆ.

ಏನಿದು ಗಣಪತಿ ಕೌತುಕ?:

ಈ ನಾಟ್ಯ ಪ್ರಯೋಗದಲ್ಲಿ ವಿಶೇಷವಾಗಿ 'ಗಣಪತಿ ಕೌತುಕ' ಯಕ್ಷಗಾನದಲ್ಲಿ ಈಗ ಮರೆಯಾಗಿರುವ ವಿಶಿಷ್ಟ ಕಲಾ ಪ್ರಕಾರ. ಹೆಚ್ಚು ಮಂದಿ ಇದರ ಹೆಸರು ಮಾತ್ರ ಕೇಳಿದ್ದಾರೆ ವಿನಃ ಪ್ರಯೋಗಗಳನ್ನು ನೋಡಿಲ್ಲ. ಯಕ್ಷಗಾನದಲ್ಲಿ ಇಂದು ಲುಪ್ತವಾಗಿರುವ ಕಲಾ ಪ್ರಕಾರವನ್ನು ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸ್ವಂತ ಪರಿಶ್ರಮದಿಂದ ಅದರ ನಡೆಯನ್ನು ಕಲಿತು ಇದೀಗ ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲರಿಗೂ ಪರಿಚಯಿಸುವ ಕಾರ್ಯದಲ್ಲಿ ತೊಡಗಿರೋದು ಖಂಡಿತಾ ಶ್ಲಾಘನೀಯ.

ಧರ್ಮಸ್ಥಳ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಿಂದ ಕಲಿತ 'ನಡೆ'..!

ಈ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದ ಅವರು, ''ಪೂರ್ವರಂಗ ಕೃತಿಯಲ್ಲಿ ಉಲ್ಲೇಖವಿರುವ 'ಗಣಪತಿ ಕೌತುಕ'ದ ಬಗ್ಗೆ ಬಹಳಷ್ಟು ಕುತೂಹಲ ಇತ್ತು. ಆದರೆ ಯಾರಲ್ಲೂ ಈ ಬಗ್ಗೆ ಅರಿವಿರಲಿಲ್ಲ. ಒಂದು ಬಾರಿ ನಮ್ಮ ಧರ್ಮಸ್ಥಳ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯೊಬ್ಬ ಕಟೀಲು ಮೇಳಕ್ಕೆ ಒತ್ತು ಸಂಗೀತಗಾರನಾಗಿ ಸೇರಿದ್ದ. ಆತನಿಗೆ 'ಗಣಪತಿ ಕೌತುಕ ಪಾಠ ಆಗಿದೆಯೇ?' ಎಂದಾಗ ಆತ 'ಆಗಿದೆ' ಎಂದಿದ್ದಾನೆ‌. ಹಾಗಾದರೆ ಎಲ್ಲಿ ಹಾಡಿ, ಕುಣಿದು ತೋರಿಸು ಎಂದೆ. ಆತ ಅದರ ನಡೆಯನ್ನು ತಿಳಿಸಿದ. ಬಳಿಕ ನಾನು 10-15 ಪ್ರಯೋಗವನ್ನು ನಮ್ಮ ಮೇಳದಲ್ಲಿಯೂ ಮಾಡಿಸಿದ್ದೆ‌. ಆ ಸಂದರ್ಭ ಜನರೂ ಕುತೂಹಲದಿಂದ ಬಂದು ಗಣಪತಿ ಕೌತುಕದ ಬಗ್ಗೆ ವಿಚಾರಿಸಿ, ಸಂತೋಷ ಪಟ್ಟಿದ್ದರು'' ಎಂದಿದ್ದಾರೆ

ಈ ಪ್ರಯೋಗಕ್ಕೆ ವ್ಯಕ್ತವಾಗಿತ್ತು ಮೆಚ್ಚುಗೆ

ಜೊತೆಗೆ ''ವಿಶ್ವ ಬಂಟರ ಯಕ್ಷ ಸಮಾಗಮದಲ್ಲಿಯೂ ಪ್ರಯೋಗ ಮಾಡಿದ್ದೆ. ಆಗಲೂ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಇದರ ನಡೆಯ ಬಗ್ಗೆ ಅರಿವಿದ್ದು, ಎಲ್ಲರ ಪ್ರಯೋಗದಲ್ಲಿಯೂ ಸಾಕಷ್ಟು ವ್ಯತ್ಯಾಸವಿದೆ‌. ಆದ್ದರಿಂದ ಇದರ ಮೂಲ ಯಾವುದು ಎಂಬುದಕ್ಕೆ ತಜ್ಞರನ್ನು ಸೇರಿಸಿ ಒಂದು ಕಮ್ಮಟ ಮಾಡಿಸಿದ್ದಲ್ಲಿ ಮೂಲದ ಶೋಧನೆಗೂ, ನಿರ್ದಿಷ್ಟವಾಗಿಯೂ ಇದಮಿತ್ತಂ ಎಂಬ ಪ್ರಯೋಗದ ಬುನಾದಿಗೂ ಸಹಕಾರಿಯಾಗಲಿದೆ'' ಎಂದಿದ್ದಾರೆ.

ದಶಾವತಾರದ ಪ್ರಯೋಗ:

'ದಶಾವತಾರ' ಎಂಬ ಪ್ರಯೋಗವನ್ನೂ ತಾವೇ ಭಾಗವತಿಕೆ ಮಾಡಿ ನಿರ್ದೇಶಿಸಿರುವ ಬೊಟ್ಟಿಕೆರೆ ಭಾಗವತರು, ಯಕ್ಷಗಾನದ ಪೂರ್ವರಂಗ ಕುಣಿತಕ್ಕಿಂತ ಭಿನ್ನವಾದ ನಾಟ್ಯ ಹಾಗೂ ಮುದ್ರೆಯನ್ನು ಪರಿಚಯಿಸಿದ್ದಾರೆ. ಇದೆಲ್ಲವೂ ಯಕ್ಷಗಾನದ ವಿದ್ಯಾರ್ಥಿಗಳಿಗೆ, ಯಕ್ಷಗಾನದಲ್ಲಿ ಈಗಾಗಲೇ ಇರುವ ಕಲಾವಿದರಿಗೆ ಪ್ರಯೋಜನವಾಗಲಿದೆ.

ಅಂಬುರುಹ ಯಕ್ಷಸದನ ಈವರೆಗೆ ಒಂಭತ್ತು ಪ್ರಯೋಗಗಳನ್ನು ಫೇಸ್​​ಬುಕ್​ಗೆ ಅಪ್ಲೋಡ್ ಮಾಡಿದ್ದು ಎಲ್ಲಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಷ್ಟೆಲ್ಲಾ ಆದರೂ 'ಮಕ್ಕಳ ಕ್ರಿಯೇಟಿವಿಟಿಗೆ ನಾನು ಪ್ರೋತ್ಸಾಹ ನೀಡುತ್ತಿದ್ದೇನೆಯೇ ಹೊರತು ನನ್ನದೇನೂ ಇಲ್ಲ' ಎನ್ನುವ ಬೊಟ್ಟಿಕೆರೆ ಭಾಗವತರ ಹೃದಯವೈಶಾಲ್ಯತೆ ಹಾಗೂ ನಿರಂಹಕಾರತ್ವ ನಿಜವಾಗಿಯೂ ಮೆಚ್ಚುವಂಥದ್ದು.

Last Updated : May 2, 2020, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.