ಬಂಟ್ವಾಳ: ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಐದನೇ ಮೇಳದ ಚೌಕಿಯಲ್ಲಿ ಸಹಾಯಕರಾಗಿದ್ದ ಅಚ್ಯುತ ನಾಯಕ್ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೋಮವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಬಂಟ್ವಾಳದ ಪಲ್ಲಮಜಲು ಎಂಬಲ್ಲಿ ಯಕ್ಷಗಾನ ಪ್ರದರ್ಶನ ಮುಗಿದ ಬಳಿಕ ಪರಿಕರಗಳನ್ನು ಜೋಡಿಸಿಡುವಾಗ ಅವರು ಕುಸಿದು ಬಿದ್ದಿದ್ದರು.
ಪ್ರದರ್ಶನ ಮುಗಿದ ಬಳಿಕ ಪರಿಕರಗಳನ್ನು ವಾಹನಕ್ಕೆ ಲೋಡ್ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆಯೇ ಸಾವನ್ನಪ್ಪಿದ್ದಾರೆ. ಅವರು ಮಣಿನಾಲ್ಕೂರು ಬಳಿಯ ಕೊಡಂಗೆ ನಿವಾಸಿಯಾಗಿದ್ದಾರೆ. ಅಚ್ಯುತ ನಾಯಕ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ:ಬೀದಿ ಬದಿಯಲ್ಲಿ ಸಿಕ್ಕಿತು ಲಕ್ಷ ಗಟ್ಟಲೆ ಹಣ : ಅರ್ಧ ಗಂಟೆಯಲ್ಲಿ ಕೈತಪ್ಪಿದು ಹೀಗೆ...