ETV Bharat / state

ಕ್ರೀಡೆಯಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ ಯಕ್ಷಗಾನ ಕಲಾವಿದರು! - ಯಕ್ಷಧ್ರುವ ಪಟ್ಲ ಫೌಂಡೇಶನ್

ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಪ್ರಥಮ ಬಾರಿಗೆ ಆಯೋಜನೆಗೊಂಡ ತೆಂಕು-ಬಡಗು ಯಕ್ಷಗಾನ ಕಲಾವಿದರ ಕ್ರೀಡಾಕೂಟ ನಗರದ ಲೇಡಿಹಿಲ್​​ನಲ್ಲಿರುವ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.

ಯಕ್ಷಕಲಾವಿದರ ಕ್ರಿಕೆಟ್​
author img

By

Published : May 29, 2019, 2:17 AM IST

ಮಂಗಳೂರು: ಕರಾವಳಿಯಲ್ಲಿ ಪ್ರತಿ ರಾತ್ರಿಯನ್ನು ಯಕ್ಷಲೋಕದ ಬಣ್ಣ ಬಣ್ಣದ ವೇಷಗಳಿಂದ ವಿಸ್ಮಯಗೊಳಿಸುವ ಯಕ್ಷಗಾನ ಕಲಾವಿದರು ಮಂಗಳವಾರ ಯಾವುದೇ ಬಣ್ಣ ಹಾಕದೆ ಕ್ರೀಡಾಂಗಣಕ್ಕಿಳಿದು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದರು. ಇನ್ನು ಪ್ರೇಕ್ಷಕರು ಯಕ್ಷಲೋಕದಲ್ಲಿ ರಾಕ್ಷಸ, ದೇವತೆ, ದೇವಿ, ರಾಮ, ಕೃಷ್ಣ, ಬ್ರಹ್ಮ, ಈಶ್ವರ, ವಿಷ್ಣು, ಅಪ್ಸರೆ, ದಾನವ, ದೈತ್ಯರಾಗಿ ಮೆರೆಯುತ್ತಿದ್ದ ಕಲಾವಿದರಲ್ಲಿ ಧೋನಿ, ಕೊಹ್ಲಿ, ದ್ರಾವಿಡ್, ಸಚಿನ್, ಸೆಹ್ವಾಗ್​ರನ್ನು ಕಂಡು ಪುಳಕಿತರಾದರು.

ಕ್ರೀಡಾಂಗಳದಲ್ಲಿ ಮೆರುಗು ತಂದ ಯಕ್ಷಗಾನ ಕಲಾವಿದರ ಕ್ರಿಕೆಟ್​

ಹೌದು, ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಪ್ರಥಮ ಬಾರಿಗೆ ಆಯೋಜನೆಗೊಂಡ ತೆಂಕು-ಬಡಗು ಯಕ್ಷಗಾನ ಕಲಾವಿದರ ಕ್ರೀಡಾಕೂಟವು ನಗರದ ಲೇಡಿಹಿಲ್​ನಲ್ಲಿರುವ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು. ಯಕ್ಷಲೋಕದಲ್ಲಿ ದಿನವೂ ಮಣಭಾರದ ವಸ್ತ್ರಾಭರಣ, ಬಣ್ಣಗಳಲ್ಲೇ ಮುಳುಗಿದ್ದ ಕಲಾವಿದರು ಇಂದು ಎಲ್ಲವನ್ನೂ ಮರೆತು ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಮೆರೆದರು.

ಯಕ್ಷಗಾನದಲ್ಲಿ ನಡೆಯುವ ಕೂಡಾಟ, ಜೋಡಾಟ, ಕಲಾವಿದರ ನಡುವಿನ ಪೈಪೋಟಿ, ವಾಕ್ಚಾತುರ್ಯ ಸ್ಪರ್ಧೆಯಂತೆ ಇಲ್ಲೂ ಬೇರೆ ಬೇರೆ ಮೇಳಗಳ ಕಲಾವಿದರ ನಡುವೆ ತೀವ್ರ ಪೈಪೋಟಿ ನಡೆಯಿತು.

ಇನ್ನು ಈ ಕ್ರೀಡಾಕೂಟದಲ್ಲಿ ವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ತೆಂಕು ಬಡಗಿನ ಸುಮಾರು 44 ಮೇಳಗಳ ಹಿಮ್ಮೇಳ-ಮುಮ್ಮೇಳ-ಹೊರೆ ಕೆಲಸದರು ಸೇರಿದಂತೆ 700 ಕಲಾವಿದರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕೇವಲ ಕ್ರಿಕೆಟ್ ಮಾತ್ರವಲ್ಲದೆ ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ, ಥ್ರೋ ಬಾಲ್, ಸಂಗೀತ ಹೀಗೆ ದಿನವಿಡೀ ವಿವಿಧ ಕ್ರೀಡೆಗಳಲ್ಲಿ ಯಕ್ಷಗಾನ ಕಲಾವಿದರು ತಮ್ಮನ್ನು ತೊಡಗಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕುಂದಾಪುರ, ಉಡುಪಿ, ದ.ಕ., ಕಾಸರಗೋಡು ಜಿಲ್ಲೆಗಳ 24 ಮೇಳಗಳ ಕಲಾವಿದರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ನಮಗೆ ಸಂತೋಷ ತಂದಿದೆ. ಇದರಿಂದ ಕಲಾವಿದರು ಯಕ್ಷಗಾನ ಮಾತ್ರವಲ್ಲದೆ ಕ್ರೀಡೆಯಲ್ಲಿಯೂ ತಮ್ಮ ಸಾಮರ್ಥ್ಯ ತೋರಿಸಬಲ್ಲರು ಎಂದು ತಿಳಿದು ಬಂದಿದೆ. ಅಲ್ಲದೆ ಇದೂ ಮನಃ ಪರಿವರ್ತನೆಗೂ ಒಂದು ಸದಾವಕಾಶ ಎಂದರು.

ಇದೇ ವೇಳೆ ಮಾತನಾಡಿದ ಕಟೀಲು ಮೇಳದ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ಯ, ಯಕ್ಷಗಾನ ಕಲಾವಿದರು ತಮ್ಮ ಪ್ರತಿಭೆಯನ್ನು ರಂಗಸ್ಥಳದಲ್ಲಿ ಮಾತ್ರ ತೋರುತ್ತಿದ್ದರು. ಆದರೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ ಕ್ರೀಡಾಕೂಟದ ಮೂಲಕ ಕಲಾವಿದರಿಗೆ ತಮ್ಮ ಕ್ರೀಡಾ ಸಾಮರ್ಥ್ಯದ ಪ್ರದರ್ಶನಕ್ಕೆ ಸುವರ್ಣ ಅವಕಾಶ ಒದಗಿ ಬಂದಿದೆ. ತೆಂಕು-ಬಡಗಿನ ಹಲವಾರು ಕಲಾವಿದರು ತಮ್ಮ ಕ್ರೀಡಾ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

Intro:ವಿಡಿಯೋ

Byte ನಲ್ಲಿ ಇರುವವರು

೧. ಹ್ಯಾಟ್, ಕೂಲಿಂಗ್ ಗ್ಲಾಸ್ ಹಾಕಿದವರು...ಪಟ್ಲ ಸತೀಶ್ ಶೆಟ್ಟಿ

೨. ಕೆಂಪು ನೀಲಿ ಅಂಗಿ ಹಾಕಿದವರು... ಪೂರ್ಣೇಶ್ ಆಚಾರ್ಯ

Body:ವಿಡಿಯೋ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.