ಮಂಗಳೂರು: ಕೋವಿಡ್-19 ಸೋಂಕು ಎಲ್ಲೆಡೆ ಆತಂಕ ಸೃಷ್ಟಿಸಿರುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಮಾರ್ಚ್ 31ರವರೆಗೆ ಮಂಗಳೂರು ಧರ್ಮ ಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ನಿಗದಿತ ಸಮಯದಲ್ಲಿ ನಡೆಯುವ ಎಲ್ಲಾ ಬಲಿಪೂಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನ್ಹಾ ತಿಳಿಸಿದ್ದಾರೆ.

ಎಲ್ಲಾ ಚರ್ಚ್ಗಳಲ್ಲಿ ಭಾನುವಾರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಆದರೆ ಕೋವಿಡ್-19 ಸೋಂಕು ಆದಷ್ಟು ಬೇಗ ನಿವಾರಣೆಯಾಗಲು ಸಾರ್ವಜನಿಕರ ಪ್ರಯತ್ನವೂ ಅಗತ್ಯ. ಆದ್ದರಿಂದ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚ್ಗಳಲ್ಲಿ ಪ್ರತೀ ಭಾನುವಾರ ನಡೆಯುವ ಸಾಮೂಹಿಕ ಬಲಿ ಪೂಜೆಗಳನ್ನು ಮಾರ್ಚ್ 31ರವರೆಗೆ ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.