ETV Bharat / state

"ನನ್ನ ಜೀವನ-ಯೋಗ ಜೀವನ"... 6 ನೇ ವಿಶ್ವ ಯೋಗ ದಿನಾಚರಣೆಗೆ ಉಜಿರೆಯಲ್ಲಿ ಚಾಲನೆ - ಉಜಿರೆ ಯೋಗ ದಿನಾಚರಣೆ ಸುದ್ದಿ

ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ “ನನ್ನ ಜೀವನ-ಯೋಗ ಜೀವನ” ಮನೆಯೇ ಮೊದಲ ಯೋಗ ಚಾವಡಿ” ಸದೃಢ- ಸಶಕ್ತ - ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಉಜಿರೆ‌ ಅತ್ತಾಜೆ ಕೇಶವ ಭಟ್ ಮನೆಯಲ್ಲಿ 6 ನೇ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು.

world yoga day
6 ನೇ ವಿಶ್ವ ಯೋಗ ದಿನಕ್ಕೆ ಚಾಲನೆ
author img

By

Published : Jun 21, 2020, 1:51 PM IST

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ “ನನ್ನ ಜೀವನ-ಯೋಗ ಜೀವನ”, "ಮನೆಯೇ ಮೊದಲ ಯೋಗ ಚಾವಡಿ” ಸದೃಢ - ಸಶಕ್ತ - ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಉಜಿರೆ‌ ಅತ್ತಾಜೆ ಕೇಶವ ಭಟ್ ಮನೆಯಲ್ಲಿ 6 ನೇ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು.

ಯೋಗಾಭ್ಯಾಸದಿಂದ ನಮ್ಮ ದೇಹದಲ್ಲಿ ಸಹಜ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ವೈಜ್ಞಾನಿಕ ತಾಂತ್ರಿಕ ಬೆಳವಣಿಗೆಯಿಂದ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದ್ದು, ಮಾನವರು ಮಾನವೀಯ ಮೌಲ್ಯಗಳನ್ನು ಮರೆತು ಯಾಂತ್ರಿಕರಾಗಿದ್ದಾರೆ. ಈ ಯಾಂತ್ರಿಕ ಯುಗದ ಕೊಡುಗೆಯೇ "ಒತ್ತಡ" ತನ್ನ ಮೂಲಕ ಆರೋಗ್ಯದಲ್ಲಿ ಏರು ಪೇರು ಮಾನಸಿಕ ಅಸ್ವಸ್ಥತೆ ಇಂದಿನ ಪ್ರಪಂಚದ ಯಾಂತ್ರಿಕ ನೋಟ, ವಿಜ್ಞಾನ ತಂತ್ರಜ್ಞಾನ ಜೀವನಶೈಲಿ ಇತ್ಯಾದಿಗಳು ಅವೆಲ್ಲಕ್ಕಿಂತ ಪವಿತ್ರವಾದ ಸತ್ಯವಾದ ದಿವ್ಯವಾದ ಆರೋಗ್ಯ ಪೂರ್ಣ ಬದುಕಿನೆಡೆಗೆ ಬದಲಾಗಬೇಕಿದೆ. ಪಂಚ ಭೂತಗಳಿಂದ ರೂಪುಗೊಂಡ ಈ ಶರೀರವನ್ನು ಸದೃಢವಾಗಿಸಲು ಒತ್ತಡ ನಿಭಾಯಿಸಿ ಮಾನಸಿಕ ಕ್ಷಮತೆಯನ್ನು ಪಡೆಯಲು ಸುಲಭ ಮತ್ತು ಸರಳ ವಿಧಾನವೇ ಯೋಗವಾಗಿದೆ.

6 ನೇ ವಿಶ್ವ ಯೋಗ ದಿನಕ್ಕೆ ಚಾಲನೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯಲು ಶರೀರವೇ ಮಾಧ್ಯಮ. ಶರೀರವು ಸ್ವಾಸ್ಥ್ಯವಾಗಿದ್ದರೆ ಮಾತ್ರ ಜೀವನದಲ್ಲಿ ನಾವು ಕಾಣುವ ಕನಸುಗಳನ್ನು ನನಸಾಗಿಸಲು ಸಾಧ್ಯ. ದೇಹವನ್ನು ಸದೃಢವಾಗಿಸಿ, ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ನೆಮ್ಮದಿಯ ಬದುಕು ನಡೆಸಲು ಯೋಗ ಅತ್ಯುತ್ತಮ ಮಾರ್ಗ ಎಂದರು.

ಕಳೆದ 5 ವರ್ಷಗಳಿಂದ ವಿಶ್ವ ಯೋಗ ದಿನವನ್ನು ಬೇರೆ ಬೇರೆ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜಿನ ಮಕ್ಕಳನ್ನು ತರಬೇತುಗೊಳಿಸಿ ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶಿಸುವ ಮೂಲಕ ಆಚರಿಸುತ್ತಿದ್ದೆವು. ಆದರೆ ಈ ವರ್ಷ ಯೋಗವು ಮನೆ ಮನೆಗಳಲ್ಲಿ ಪ್ರಾರಂಭವಾಗಬೇಕು ಎಂಬ ದೃಷ್ಟಿಯಿಂದ ವಿಶ್ವದಾದ್ಯಂತ 40 ಸಾವಿರ ಕುಟುಂಬಗಳು ಪಾಲ್ಗೊಂಡಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ. ಧ.ಮಂ ಯೋಗ ಮತ್ತು ನ್ಯೆತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ. ಶಶಿಕಾಂತ ಜೈನ್, ಕಾಲೇಜಿನ ಡೀನ್‍ಗಳಾದ ಡಾ. ಶಿವಪ್ರಸಾದ್ ಶೆಟ್ಟಿ, ಡಾ. ಬಾಲಕೃಷ್ಣ ಶೆಟ್ಟಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.