ETV Bharat / state

ಎಸ್. ಅಂಗಾರ ಸಚಿವರಾಗಲು ಸುಳ್ಯದ ಮಹಿಳೆಯ ಪತ್ರವೇ ಕಾರಣ?

ಸುಳ್ಯ ತಾಲೂಕಿನ ಕೊಡಿಯಾಲದ ನೀರಜಾಕ್ಷಿ ಕೆ.ಕೆ. ನಾಯ್ಕ್ ರವರು ಪ್ರಧಾನ ಮಂತ್ರಿಯವರಿಗೆ ಕೆಲವು ತಿಂಗಳುಗಳ ಹಿಂದೆ ಪತ್ರ ಬರೆದಿದ್ದರು. ಶಾಸಕರಿಗೆ ಮಂತ್ರಿ ಸ್ಥಾನ ಸಿಗಲು ಈ ಪತ್ರ ಕಾರಣವಾಯಿತೇ ಎಂಬುದು ಇದೀಗ ಸುಳ್ಯದ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

woman-letter-to-sulya-is-become-minister-angara-news
ಶಾಸಕ ಎಸ್.ಅಂಗಾರ ಸಚಿವರಾಗಲು ಸುಳ್ಯದ ಈ ಮಹಿಳೆಯ ಪತ್ರ ಕಾರಣವಾಯಿತೇ..?
author img

By

Published : Jan 15, 2021, 5:51 PM IST

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರಗೆ ಮಂತ್ರಿ ಸ್ಥಾನ ದೊರೆಯಲು ಓರ್ವ ಮಹಿಳೆ ಪ್ರಧಾನ ಮಂತ್ರಿಗೆ ಬರೆದ ಪತ್ರ ಕಾರಣವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ.

ಓದಿ: ಶಾಸಕ ಅಂಗಾರಗೆ ಒಲಿದ ಮಂತ್ರಿ ಭಾಗ್ಯ?

ಸುಳ್ಯ ತಾಲೂಕಿನ ಕೊಡಿಯಾಲದ ನೀರಜಾಕ್ಷಿ ಕೆ.ಕೆ. ನಾಯ್ಕ್ ರವರು ಪ್ರಧಾನ ಮಂತ್ರಿಯವರಿಗೆ ಕೆಲವು ತಿಂಗಳುಗಳ ಹಿಂದೆ ಪತ್ರ ಬರೆದಿದ್ದರು. ಶಾಸಕರಿಗೆ ಮಂತ್ರಿ ಸ್ಥಾನ ಸಿಗಲು ಈ ಪತ್ರ ಕಾರಣವಾಯಿತೇ ಎಂಬುದು ಇದೀಗ ಸುಳ್ಯದ ಸಾರ್ವಜನಿಕ ವಲಯದಲ್ಲಿನ ಮಾತು.

ಸುಳ್ಯ ತಾಲೂಕಿನ ತೀರಾ ಹಿಂದುಳಿದ ಗ್ರಾಮವಾದ ಕೊಡಿಯಾಲ ಗ್ರಾಮದಲ್ಲಿ ನೀರಜಾಕ್ಷಿ ಎಂಬುವರು ತಾನು ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಯೋಜನೆಯಿಂದ ಪ್ರೇರಿತಳಾಗಿ ಸ್ವಾವಲಂಬಿ ಬದುಕು ಸಾಗಿಸಿಕೊಂಡು ಬರುತ್ತಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ಹಲವಾರು ಮೂಲ ಸೌಕರ್ಯದಿಂದ ವಂಚಿತರಾಗಿರುವ ಸುಳ್ಯ ತಾಲೂಕು ಇದೀಗ ಶಾಸಕ ಎಸ್. ಅಂಗಾರರವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿದೆ.

ಆರು ಬಾರಿ ಶಾಸಕರಾಗಿರುವ ಅವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಬಹುತೇಕ ಮೂಲ ಸೌಕರ್ಯಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಆಗಿದೆ. ಕ್ಷೇತ್ರದ ಅಭಿವೃದ್ಧಿಗಳ ವೇಗಕ್ಕಾಗಿ ಶಾಸಕರಾದ ಎಸ್. ಅಂಗಾರ ಅವರನ್ನು ಮಂತ್ರಿಯಾಗಿಸಿದಲ್ಲಿ ಇನ್ನಷ್ಟು ಪೂರಕವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದರು.

ಇದರ ಪ್ರತಿಗಳನ್ನು ನೀರಜಾಕ್ಷಿ ಅವರು ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು, ಮುಖ್ಯಮಂತ್ರಿಗಳು ಸೇರಿದಂತೆ ಹಲವರಿಗೆ ಕಳುಹಿಸಿದ್ದರು. ಇದೀಗ ಇದರ ಫಲವಾಗಿ ಎಸ್.ಅಂಗಾರರಿಗೆ ಮಂತ್ರಿ ಸ್ಥಾನ ಸಿಕ್ಕಿದೆ ಎಂಬುದು ಸಾರ್ವಜನಿಕ ವಲಯದಲ್ಲಿನ ಮಾತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.