ETV Bharat / state

ವಿಟ್ಲದಲ್ಲಿ ಬಡ ಮಹಿಳೆ ಆತ್ಮಹತ್ಯೆ : ಅಂತ್ಯಕ್ರಿಯೆ ನೆರವೇರಿಸಿದ ಫ್ರೆಂಡ್ಸ್ ವಿಟ್ಲ ತಂಡ

author img

By

Published : Jan 7, 2021, 8:49 PM IST

ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಬಡ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಅಂತ್ಯಸಂಸ್ಕರ ನೆರವೇರಿಸಲು ಈಕೆಯ ಪತಿಗೆ ಫ್ರೆಂಡ್ಸ್ ವಿಟ್ಲ ತಂಡ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

ವಿಟ್ಲದಲ್ಲಿ ಬಡ ಮಹಿಳೆ ಆತ್ಮಹತ್ಯೆ
Woman committed suicide in vital

ಬಂಟ್ವಾಳ: ತಾಲೂಕಿನ ವಿಟ್ಲದಲ್ಲಿ ಬಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಫ್ರೆಂಡ್ಸ್ ವಿಟ್ಲ ತಂಡ ಅವರ ಅಂತ್ಯಕ್ರಿಯೆಗೆ ನೆರವಾಗಿ ಮಾನವೀಯತೆ ಮೆರೆದಿದೆ.

ಬಡತನ, ಕುಡಿತದ ಚಟದಿಂದ ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಬಾಲಕೃಷ್ಣ ನಾಯ್ಕರ ಪತ್ನಿ ವನಿತಾ (40) ಗುರುವಾರ ಬೆಳಗ್ಗೆ ತನ್ನ ಮನೆಯೊಳಗೆ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳವಾಡಿದ್ದರು. ಇದರಿಂದ ಮನವೊಂದು ವನಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ವನಿತಾರಿಗೆ ನಾಲ್ವರು ಮಕ್ಕಳಿದ್ದು, ಅವರ ಪೈಕಿ ಇಬ್ಬರು ಹೆಣ್ಣುಮಕ್ಕಳನ್ನು ಮೂರು ವರ್ಷಗಳ ಹಿಂದೆಯೇ ಕನ್ಯಾನದ ಭಾರತ ಸೇವಾಶ್ರಮಕ್ಕೆ ಸೇರಿಸಲಾಗಿತ್ತು. ಐದು ತಿಂಗಳ ಹಿಂದೆ ಈ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಜೊತೆಗೆ ಮೂರು ವರ್ಷದ ವಿಶೇಷಚೇತನ ಮಗುವೂ ಇದೆ.

ಪತ್ನಿಯ ಅಂತ್ಯಸಂಸ್ಕಾರ ನಡೆಸಲು ಪತಿ ಬಾಲಕೃಷ್ಣ ನಾಯ್ಕ್ ಬಳಿ ಹಣ ಇರಲಿಲ್ಲ. ಈ ವೇಳೆ ವಿಟ್ಲ ಫ್ರೆಂಡ್ಸ್ ತಂಡ ನೆರವಿಗೆ ಬಂದಿದ್ದು, ಮುರಳೀಧರ ನೇತೃತ್ವದಲ್ಲಿ ಈ ತಂಡ ಪಳಿಕೆ ಹಿಂದೂ ರುದ್ರಭೂಮಿಯಲ್ಲಿ, ಮನೆಯವರ ಸಮ್ಮುಖದಲ್ಲಿ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದೆ. ಆತ್ಮಹತ್ಯೆ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.