ಮಂಗಳೂರು: ಪತಿ ಮಲಗಿದ್ದ ವೇಳೆ ಅದೇ ಕೋಣೆಯಲ್ಲಿ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ರೋಳಿಯಲ್ಲಿ ನಡೆದಿದೆ.
ಸೂಫಿಯ ಬೇಗಂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ತಮ್ಮ ಪತಿಯೊಂದಿಗೆ ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಕಳೆದ 5 ತಿಂಗಳಿನಿಂದ ವಾಸವಾಗಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು ಅಡುಗೆ ಕೆಲಸ ಮಾಡಿ ಮತ್ತೆ ಮಲಗಿದ್ದಾರೆ. ಆದರೆ, ಮತ್ತೇ ಪತಿಗೆ ಬೆಳಿಗ್ಗೆ 7.45 ಕ್ಕೆ ಎಚ್ಚರವಾದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾರೆ.
ಈ ಬಗ್ಗೆ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ