ETV Bharat / state

ಸೌದಿ ಅರೇಬಿಯಾದಲ್ಲಿ ಪತಿ ಬಂಧನ: ಬಿಡುಗಡೆಗೊಳಿಸಿ ಎಂದು ಮೊರೆಯಿಟ್ಟ ಪತ್ನಿ

author img

By

Published : Nov 11, 2021, 7:15 PM IST

ಮಂಗಳೂರಿನ ಬಿಕರ್ನಕಟ್ಟೆ ಮೂಲದವರಾದ ಶೈಲೇಶ್ ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.‌ ಕಳೆದ ವರ್ಷದ ಫೆಬ್ರವರಿಯಲ್ಲಿ ಭಾರತದ ಬಗ್ಗೆ ದೇಶಪ್ರೇಮ ವ್ಯಕ್ತಪಡಿಸುವ ಪೋಸ್ಟ್ ಹಾಕಿದ್ದರು. ಆ ಬಳಿಕ ಅಪರಿಚಿತ ವ್ಯಕ್ತಿಯೋರ್ವನು ಅವರಿಗೆ ಕರೆ ಮಾಡಿ 'ನಿನ್ನ ಫೇಸ್ ಬುಕ್ ಖಾತೆಯನ್ನು ಕೂಡಲೇ ಅಳಿಸಬೇಕು‌‌. ಇಲ್ಲದಿದ್ದಲ್ಲಿ ನಿನ್ನನ್ನು ಇಲ್ಲಿರಲು ಬಿಡುವುದಿಲ್ಲ, ಮುಗಿಸುತ್ತೇವೆ' ಎಂದು ಬೆದರಿಕೆ ಹಾಕಿದ್ದ. ಹಾಗಾಗಿ ಅವರು ತಕ್ಷಣ ತಮ್ಮ ಫೇಸ್ ಬುಕ್ ಖಾತೆಯನ್ನು ಅಳಿಸಿ ಹಾಕಿದ್ದರು. ಇದಾದ ನಂತರ ಯಾರೋ ಹ್ಯಾಕ್​ ಮಾಡಿ ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದಾರೆ ಎನ್ನಲಾಗಿದೆ.

woman appealed to government to release her husband from Saudi Arabia prison
ಸೌದಿ ಅರೇಬಿಯಾದಲ್ಲಿ ಪತಿ ಬಂಧನ

ಮಂಗಳೂರು: ದುಷ್ಕರ್ಮಿಗಳಿಂದ ನಕಲಿ‌ ಫೇಸ್‌ಬುಕ್ ಜಾಲಕ್ಕೆ ಸಿಲುಕಿ, ಸೌದಿ ಅರೇಬಿಯಾ ಸರ್ಕಾರದ (Government of Saudi Arabia) ಕೆಂಗಣ್ಣಿಗೆ ಗುರಿಯಾಗಿ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿರುವ ಮಂಗಳೂರಿನ ಶೈಲೇಶ್ ಕುಮಾರ್‌ನನ್ನು ಬಿಡುಗಡೆಗೊಳಿಸಿ ಎಂದು ಅವರ ಪತ್ನಿ ಕವಿತಾ ಅಳಲು ತೋಡಿಕೊಂಡಿದ್ದಾರೆ.

ಮಂಗಳೂರಿನ ಬಿಕರ್ನಕಟ್ಟೆ (Bikarnakatte, Mangalore)ಮೂಲದವರಾದ ಶೈಲೇಶ್ ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.‌ ಕಳೆದ ವರ್ಷದ ಫೆಬ್ರವರಿಯಲ್ಲಿ ಭಾರತದ ಬಗ್ಗೆ ದೇಶ ಪ್ರೇಮ ವ್ಯಕ್ತಪಡಿಸುವ ಪೋಸ್ಟ್ ಹಾಕಿದ್ದರು. ಆ ಬಳಿಕ ಅಪರಿಚಿತ ವ್ಯಕ್ತಿಯೋರ್ವ ಅವರಿಗೆ ಕರೆ ಮಾಡಿ 'ನಿನ್ನ ಫೇಸ್ ಬುಕ್ ಖಾತೆಯನ್ನು ಕೂಡಲೇ ಅಳಿಸಬೇಕು‌‌. ಇಲ್ಲದಿದ್ದಲ್ಲಿ ನಿನ್ನನ್ನು ಇಲ್ಲಿರಲು ಬಿಡುವುದಿಲ್ಲ, ಮುಗಿಸುತ್ತೇವೆ' ಎಂದು ಬೆದರಿಕೆ ಹಾಕಿದ್ದ. ಹಾಗಾಗಿ ಅವರು ತಕ್ಷಣ ತಮ್ಮ ಫೇಸ್ ಬುಕ್ ಖಾತೆಯನ್ನು ಅಳಿಸಿ ಹಾಕಿದ್ದರು.

ಆದರೆ, ಅದಾಗಿ ಕೆಲ ದಿನಗಳಲ್ಲಿ ಶೈಲೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಇಸ್ಲಾಂ ಧರ್ಮದ ವಿರುದ್ಧ ಹಾಗೂ ಸೌದಿ ಅರೇಬಿಯಾ ದೊರೆಗೆ ಅವಹೇಳನ ಮಾಡುವ ರೀತಿಯ ಅನೇಕ ಪೋಸ್ಟ್‌ ಗಳನ್ನು ಅಪ್ಲೋಡ್ ಮಾಡಲಾಗಿದೆ. ಅಲ್ಲದೆ, ಈ ಪೋಸ್ಟ್‌ಗಳು ಸೌದಿ ಅರೇಬಿಯಾ ಪೊಲೀಸರಿಗೆ ದೊರೆಯುವ ಹಾಗೆ ಮಾಡಿ ಶೈಲೇಶ್ ಕುಮಾರ್ ಅವರನ್ನು ಷಡ್ಯಂತ್ರಕ್ಕೆ ಬಲಿ ಮಾಡಲಾಗಿದೆ ಎನ್ನಲಾಗಿದೆ.

ಈ ಸಂಬಂಧ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ (BJP leader Jitendra Kottari) ಮಾತನಾಡಿ, ಈ ವಿಚಾರದಲ್ಲಿ ನಿರಪರಾಧಿಯಾಗಿರುವ ಶೈಲೇಶ್ ಕುಮಾರ್ ತನ್ನನ್ನು ಷಡ್ಯಂತ್ರಕ್ಕೆ ಬಲಿ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲು ಹೋದಾಗ ಸೌದಿ ಅರೇಬಿಯಾ ಪೊಲೀಸರು ಯಾವುದೇ ತನಿಖೆ ನಡೆಸದೆ ಬಂಧಿಸಿದ್ದಾರೆ. ಇದೀಗ ಒಂದೂವರೆ ವರ್ಷಗಳಿಂದ ಅವರು ಸೌದಿ ಅರೇಬಿಯಾ ಜೈಲಿನಲ್ಲಿದ್ದಾರೆ. ಅವರ ಬಗ್ಗೆ ವಾದ ಮಾಡಲು ಅಲ್ಲಿನ ಯಾವುದೇ ವಕೀಲರು ಮುಂದೆ ಬರುತ್ತಿಲ್ಲ. ಸೌದಿ ಅರೇಬಿಯಾದಲ್ಲಿರುವ ಭಾರತದ ಸಂಘಟನೆಗಳು ಕೂಡಾ ಮೌನ ವಹಿಸಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು (Nalin Kumar Kateel, Dakshina Kannada District MP) ಅವರಲ್ಲಿ ಮನವಿ ಮಾಡಲಾಗಿತ್ತು. ಅವರು ಈ ಬಗ್ಗೆ‌‌ ಭಾರತ ಸರ್ಕಾರದ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ವಿಚಾರದಲ್ಲಿ ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿದಲ್ಲಿ ಮಾತ್ರ ಅವರ ಬಿಡುಗಡೆ ಸಾಧ್ಯ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಈ ಬಗ್ಗೆ ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿ ಶೈಲೇಶ್ ಕುಮಾರ್ ಬಿಡುಗಡೆ ಮಾಡಿಸಬೇಕು ಎಂದು ಜಿತೇಂದ್ರ ಕೊಟ್ಟಾರಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.