ಮಂಗಳೂರು: ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸಕ್ಕಾಗಿ ಇಂಟರ್ ವ್ಯೂಗೆ ಬೆಂಗಳೂರಿನಿಂದ ಬಸ್ನಲ್ಲಿ ಬರುತ್ತಿದ್ದ, ಯುವತಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ ಸಿ ರೋಡ್ ನಿವಾಸಿ ಮಹಮ್ಮದ್ ಮುಸ್ತಫ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜೂನ್ 7 ರಂದು ಸಂದರ್ಶನಕ್ಕೆಂದು ಬರುವ ವೇಳೆ ಈ ಘಟನೆ ನಡೆದಿದೆ.
ಈಕೆ ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ, ಈಕೆಯ ಸನಿಹದ ಸೀಟ್ನಲ್ಲಿದ್ದ ಯುವಕನೋರ್ವ ಕಿರುಕುಳ ನೀಡಿದ್ದಾನೆ. ಇದನ್ನು ಈಕೆ ಬಸ್ನಲ್ಲಿದ್ದ ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಬಸ್ ನಗರದ ಪಂಪ್ ವೆಲ್ ನಿಲ್ದಾಣಕ್ಕೆ ಬಂದ ವೇಳೆ ಬಸ್ನಿಂದ ಇಳಿದು ಈತ ಪರಾರಿಯಾಗಿದ್ದ. ಇಂಟರ್ ವ್ಯೂ ಮುಗಿದ ಬಳಿಕ ಕಂಕನಾಡಿ ನಗರ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿದ್ದಾರೆ.
ಇದನ್ನೂ ಓದಿ: 'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಂಜುಂದಾರ್ ಷಾ ಕಿಡಿ