ETV Bharat / state

ಸರ್ಕಾರಿ ಶಾಲೆಗಳಲ್ಲಿ ಧ್ಯಾನ, ಯೋಗ ಕಲಿಕೆಗೆ ಕ್ರಮ: ಸಚಿವ ಬಿ ಸಿ ನಾಗೇಶ್ - will start meditation and yoga in schools

ಶಿಕ್ಷಣ ಕ್ಷೇತ್ರದಲ್ಲಿ ಸಾಧಕರಾಗಿರುವವರಿಂದ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಶಾಲೆಗಳಲ್ಲಿ ಧ್ಯಾನ, ಯೋಗ ಕಲಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

bc nagesh
ಬಿ ಸಿ ನಾಗೇಶ್
author img

By

Published : Nov 20, 2022, 7:37 AM IST

ಮಂಗಳೂರು: ರಾಜ್ಯದಲ್ಲಿ ಮಕ್ಕಳ ಶೈಕ್ಷಣಿಕ ಅಧ್ಯಯನ ಉತ್ತಮಗೊಳಿಸಲು ಶಾಲೆಗಳಲ್ಲಿ ಧ್ಯಾನ, ಯೋಗ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ಕೇಶವ ಸ್ಮೃತಿ ಸಂವರ್ಧನ ಸಮಿತಿ ‌ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧಕರಾಗಿರುವವರಿಂದ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಇದನ್ನು ಜಾರಿಗೆ ತರಲಾಗುವುದು. ಧ್ಯಾನ ಹೇಗಿರಬೇಕು? ಎಲ್ಲಿ ಮಾಡಬೇಕು ಹಾಗೂ ಒಂದನೇ ತರಗತಿ ಮಕ್ಕಳಿಗೆ ಹೇಗೆ?, 10ನೇ ತರಗತಿಗೆ ಹೇಗೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ನಡೆಯಲಿದೆ ಎಂದರು.

ಈ ವಿಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಶಾಲೆಗಳಿಗೆ ಯಾವುದೇ ಮೂಲಭೂತ ಸೌಕರ್ಯವನ್ನು ನೀಡಲಿಲ್ಲ. ಆದರೆ, ಬಿಜೆಪಿ ಆಡಳಿತ ಕೊಠಡಿ, ಶಿಕ್ಷಕರ ಸಹಿತ ವಿವಿಧ ನೆಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ, ಈಗ ಧ್ಯಾನ ಮಾಡಬೇಡಿ ಎಂದು ಕಾಂಗ್ರೆಸ್‌ನವರು ನಮಗೆ ಹೇಳುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಸಿ ನಾಗೇಶ್

ಇದನ್ನೂ ಓದಿ: ಮಿತ್ತನಡ್ಕ: ಕನ್ನಡ ಶಾಲೆ ಉಳಿಸಲು ಹಿರಿಯ ವಿದ್ಯಾರ್ಥಿಗಳಿಂದ ಚಿಣ್ಣರ ಪಾರ್ಕ್ ನಿರ್ಮಾಣ

ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಆರಂಭಿಸುವ ಕುರಿತು ಒಂದು ವಿಚಾರ ಸಂಕಿರಣವನ್ನು ಡಿ.15ರೊಳಗೆ ನಡೆಸಲಾಗುವುದು. ಶಿಕ್ಷಣ ತಜ್ಞರ, ಸನ್ಯಾಸಿಗಳನ್ನು ಸೇರಿಸಿ ಅವರ ಅಭಿಪ್ರಾಯ ಪಡೆದು ತಿಂಗಳಲ್ಲಿ ಒಂದು ದಿನ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವ ವೇಳೆ ನೈತಿಕ ಶಿಕ್ಷಣವನ್ನು ಬೋಧಿಸುವ ಕಾರ್ಯ ನಡೆಸಲಾಗುವುದು. ವಿವೇಕಾನಂದರ ಹೆಸರಿನಲ್ಲಿ ವಿವೇಕ ಕೊಠಡಿಗಳ ನಿರ್ಮಾಣದ ಸಮಯದಲ್ಲಿ ಅರ್ಕಿಟೆಕ್ಟ್ ಇಂಜಿನಿಯರ್ ಅವರು ಕೇಸರಿ ಬಣ್ಣ ಧ್ಯಾನದ ಸಂಕೇತ, ತ್ಯಾಗ ಮತ್ತು ಸೂರ್ಯನ ಬೆಳಕಿನ ಬಣ್ಣ ಎಂಬ ರೀತಿಯಲ್ಲಿ ಹೇಳಿದ್ದರು. ಹೀಗಾಗಿ, ಕೇಸರಿ ಬಣ್ಣದ ಬಗ್ಗೆ ಮಾತುಕತೆ ನಡೆದಿತ್ತು. ಅಂತಿಮವಾಗಿ ಆರ್ಕಿಟೆಕ್ಟ್ ಅವರ ಮಾಹಿತಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.

ರಾಜ್ಯದ 20 ಸಾವಿರ ಅಂಗನವಾಡಿ ಹಾಗೂ 6 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಡಿ.25 ರಂದು ಎನ್‌ಇಪಿಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ಮಾಡಲಾಗಿದೆ. ಒಂದನೇ, ಎರಡನೇ ತರಗತಿಗೆ ಎರಡೆರಡು ಪುಸ್ತಕ ಇರುತ್ತದೆ. ಒಂದು ಸಂಖ್ಯಾ ಶಾಸ್ತ್ರ ವಿಚಾರಗಳನ್ನು ತಿಳಿಸಿದರೆ ಮತ್ತೊಂದು ಅಕ್ಷರ ಜ್ಞಾನವನ್ನು ನೀಡಲಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಏಕಲವ್ಯನಂತೆ ಗುರುವಿಲ್ಲದೇ ದೊಣ್ಣೆವರಸೆ ಕಲಿತ ಸರ್ಕಾರಿ ಶಾಲೆ ವಿದ್ಯಾರ್ಥಿಗಳು!

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಉದ್ಧೇಶದಿಂದ ಮತ್ತು ಮಕ್ಕಳಿಗೆ ಕೇಂದ್ರಿತ ಶಿಕ್ಷಣ ನೀಡುವ ಧ್ಯೇಯದೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಮಾತೃ ಭಾಷೆ ಮತ್ತು ಸ್ಥಾನೀಯ ಭಾಷೆಯಲ್ಲೇ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಅದಾಗಲೇ ಅಡಗಿರುವ ಸೂಪ್ತ ಪ್ರತಿಭೆಯ ಅನಾವರಣಗೊಳಿಸುವ ಪ್ರಯತ್ನವಾಗುತ್ತಿದೆ. ಸರ್ಕಾರದ ಈ ಪ್ರಯತ್ನಗಳ ಜೊತೆಗೆ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಕನ್ನಡ ಶಾಲಾ ಮಕ್ಕಳ ಹಬ್ಬದ ಮೂಲಕ ಕನ್ನಡ ಮಾಧ್ಯಮದ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದಕ್ಕಾಗಿ ಕೈಗೊಂಡಿರುವ ಕಾರ್ಯ ಗಮನಾರ್ಹ.

ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಲು ಸಿದ್ಧರಿದ್ದಾರೆ. ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುವುದಕ್ಕೆ ತಯಾರಿದ್ದಾರೆ. ಹಾಗಾಗಿ, ಸರ್ಕಾರದ ವತಿಯಿಂದ ಕನ್ನಡ ಮಾದರಿ ಶಾಲೆಗಳ ರೂಪುರೇಶೆ, ಶಾಲೆಯ ಕೊರೆತೆಗಳ ಪೂರೈಕೆ, ಮೂಲಭೂತ ಸೌಕರ್ಯಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮುಂತಾದ ಕಾರ್ಯಗಳನ್ನು ಶೀಘ್ರವಾಗಿ ಮಾಡಲಾಗುತ್ತದೆ‌ ಎಂದರು.

ಇದನ್ನೂ ಓದಿ: ವರ್ಣಮಾಲೆ ಬಗ್ಗೆ ಕೇಳಿದ್ರೆ ಮಕ್ಕಳು ಸೈಲೆಂಟ್​.. ಸರ್ಕಾರಿ ಶಾಲೆ ಶಿಕ್ಷಕರಿಗೆ ಸಹಾಯಕ ಆಯಕ್ತರ ಕ್ಲಾಸ್​

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ , ಐಎಎಸ್ ಅಧಿಕಾರಿ ನಂದಿನಿ ಕೆ.ಆರ್, ಡಾ.ಧನಂಜಯ ಕುಂಬ್ಳೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ , ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ವಾಮನ್ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಕೆ.ಸಿ.ನಾಯಕ್ , ಸ್ವಾಗತ ಸಮಿತಿಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ , ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಸಹ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.