ETV Bharat / state

ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ವ್ಯಕ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ- ಪ್ರತಿಭಾ ಕುಳಾಯಿ

ಶ್ಯಾಮ ಸುದರ್ಶನ ಭಟ್ ಮನೆಯಲ್ಲಿ ಇಲ್ಲ. ಹೆಂಡತಿ ತಾಯಿ ಜೊತೆಗೆ ಪರಾರಿಯಾಗಿದ್ದಾನೆ. ಪೊಲೀಸರೇ ತಪ್ಪಿಸಿದ್ದಾರಾ? ಎಂದು ಗೊತ್ತಿಲ್ಲ. ಇದೀಗ ಮಾನನಷ್ಟ ಮೊಕದ್ದಮೆ ಹೂಡಲು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ಸಿದ್ದತೆ ಮಾಡಿಕೊಂಡಿದ್ದೇನೆ- ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ.

Congress leader Pratibha Kulai
ಪ್ರತಿಭಾ ಕುಳಾಯಿ
author img

By

Published : Oct 24, 2022, 8:16 PM IST

ಮಂಗಳೂರು: ಟೋಲ್ ಗೇಟ್ ವಿರುದ್ದ ಹೋರಾಟ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅವಾಚ್ಯವಾಗಿ ನಿಂದಿಸಿದ ಕಹಳೆ ವೆಬ್‌ಸೈಟ್ ಸಂಪಾದಕ ಶ್ಯಾಮ‌ ಸುದರ್ಶನ ಭಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ನೀಡಿರುವ ದೂರಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಶ್ಯಾಮ ಸುದರ್ಶನ ಭಟ್ ಈಗಾಗಲೇ ವಿಡಿಯೋ ಮಾಡಿ‌ ಮಾತನಾಡಿದ್ದಾನೆ. ಆತ ಅದರಲ್ಲಿ ಸರ್ಕಾರ ಮತ್ತು ಪೊಲೀಸರ ಮೇಲೆ ಭರವಸೆ ಇದೆ ಎಂದು ಹೇಳಿದ್ದಾನೆ. ಅದರಂತೆ ಇದೆ ಎಂದು ಕಾಣುತ್ತದೆ. ಎಫ್ಐಆರ್ ಆಗಿ ಎರಡು ದಿನ ಆದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಕಮಿಷನರ್ ಅವರಿಗೆ ಫೋನ್ ಮಾಡಿದರೂ ಸ್ಪಂದನೆ ಇಲ್ಲ ಎಂದು ದೂರಿದರು.

ಸಾಮಾಜಿಕ ಜಾಲತಾಣದಲ್ಲಿ ನಿಂದನೆ..ವ್ಯಕ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ: ಪ್ರತಿಭಾ ಕುಳಾಯಿ

ದೀಪಾವಳಿ ದಿನ ಶ್ಯಾಮ ಸುದರ್ಶನ ಭಟ್ ಮನೆಯಲ್ಲಿ ಇಲ್ಲ. ಹೆಂಡತಿ ತಾಯಿ ಜೊತೆಗೆ ಪರಾರಿಯಾಗಿದ್ದಾನೆ. ಪೊಲೀಸರೇ ತಪ್ಪಿಸಿದ್ದಾರಾ? ಎಂದು ಗೊತ್ತಿಲ್ಲ. ಇದೀಗ ಮಾನ ನಷ್ಟ ಮೊಕದ್ದಮೆ ಹೂಡಲು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ಸಿದ್ದತೆ ಮಾಡಿಕೊಂಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಬರೆಯುವವರ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು.

ಪೋಸ್ಟ್ ಹಾಕಿದ ಕೆ. ಆರ್ ಶೆಟ್ಟಿ ಒಂದು ದಿನದ ಮುಂಚೆ ನಮಗೆ ಗೊತ್ತಿರುವವರ ಜೊತೆಗೆ ಮಾತಾಡಿದ್ದಾನೆ. ಆದರೆ ಪೊಲೀಸರು ಆತನ ಫೋನ್​ ಸ್ವಿಚ್ ಆಫ್ ಇದೆ, ಆತನ ಮನೆಗೆ ಬೀಗ ಹಾಕಿದೆ ಎಂದು ಹೇಳುತ್ತಿದ್ದಾರೆ. ಪೊಲೀಸರು ಉಢಾಪೆ ಉತ್ತರ ಕೊಡುತ್ತಿದ್ದಾರೆ. ಪ್ರಕರಣ ಸಂಬಂಧ ರಚಿಸಲಾಗಿರುವ ಮೂರು ತಂಡದವರು ದೀಪಾವಳಿ ಆಚರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನನಗೆ ಯಾವುದೇ ಸಹಾಯ ಸಿಕ್ಕಿಲ್ಲ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಬಿಟ್ಟು ಯಾವ ರೀತಿ ಹೋರಾಟ ಮಾಡಬೇಕು ಎಂಬ ದೂರದೃಷ್ಟಿ ನನ್ನಲ್ಲಿದೆ. ಆತ ನನ್ನಲ್ಲಿ ಕ್ಷಮೆ ಕೇಳುವವರೆಗೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಾಕಾರಿ ಕಮೆಂಟ್​.. ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.