ದಕ್ಷಿಣ ಕನ್ನಡ/ಸುಬ್ರಹ್ಮಣ್ಯ : ಕಡಬಕ್ಕೆ ಕಾಡಾನೆ ಲಗ್ಗೆ ಇಟ್ಟು ಹೋದ ಬೆನ್ನಲ್ಲೇ ಇತ್ತ ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿಯೂ ಇನ್ನೊಂದು ಕಾಡಾನೆ ಹಾವಳಿಯಿಂದಾಗಿ ಅಪಾರ ಬೆಳೆ ನಾಶವಾಗ್ತಿದೆ.
ಮಂಗಳವಾರ ರಾತ್ರಿ ವೇಳೆಯಲ್ಲಿ ಮತ್ತು ಇಂದು ರಾತ್ರಿ ಕೂಡ ಸುಬ್ರಹ್ಮಣ್ಯ ಸಮೀಪದ ಅನಿಲ ನಿವಾಸಿಗಳಾದ ಕೇಶವ್, ವೆಂಕಟೇಶ್ ಎಂಬುವರು ಸೇರಿ ಮೊದಲಾದವರ ತೋಟಕ್ಕೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಬಾಳೆ, ಅಡಿಕೆಯನ್ನು ನಾಶಪಡಿಸಿದೆ. ಆನೆ ಬಂದ ವಿಷಯ ತಿಳಿದ ಸ್ಥಳೀಯರು ಪಟಾಕಿ ಸಿಡಿಸಿ ಅಲ್ಲಿಂದ ಓಡಿಸಿದ್ದರಾದರೂ, ಆನೆ ಮಾತ್ರ ಅಲ್ಲಿಯೇ ಸುತ್ತಮುತ್ತಲಿನ ಪರಿಸರ ಬಿಟ್ಟು ಹೋಗಿಲ್ಲ.
ಕಾಡಾನೆ ಓಡಾಟ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗಿ ಪರಿಣಮಿಸಿದೆ. ಹೀಗಾಗಿ, ಅರಣ್ಯ ಇಲಾಖೆಗೆ ಆನೆ ಕಂದಕ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆನೆಯು ರಾಜ್ಯ ಹೆದ್ದಾರಿಯತ್ತ ಚಲಿಸಿದ್ದು, ಕೈಕಂಬದಿಂದ ಗುಂಡ್ಯ ಮಾರ್ಗವಾಗಿ ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಚರಿಸುವವರು ಎಚ್ಚರಿಕೆ ವಹಿಸಬೇಕಿದೆ.
ಇದನ್ನೂ ಓದಿ:ಮಾರ್ಚ್ 28 ರಿಂದ 22 ಇಂಡಿಗೊ ವಿಮಾನಗಳ ಹಾರಾಟ