ETV Bharat / state

ಮನೆಯಲ್ಲಿದ್ದ ಹಣ, ಬಂಗಾರದ ಜೊತೆ ಪತ್ನಿ, ಮಕ್ಕಳು, ಅತ್ತೆ ನಾಪತ್ತೆ : ದೂರು ನೀಡಿದ ಪತಿ - ಮೂಡುಬಿದಿರೆ ಠಾಣೆ

ಅಡ ಇಟ್ಟಿರುವ ಒಡವೆಗಳನ್ನು ಬಿಡಿಸಿಕೊಂಡು ಬರುವಂತೆ ಜಯರಾಜ್ ಶೇಖರ್ ಅವರು ಸೂಚಿಸಿದ ಬೆನ್ನಲ್ಲೇ ಜ್ಯೋತಿಮಣಿ ಮನೆಯಿಂದ ಪರಾರಿಯಾಗಿದ್ದಾರೆ. ಮಹಿಳೆಯು ತನ್ನ ತವರು ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ..

wife-with-gold-children-mother-in-law-missing-in-mangalore
ಮನೆಯಲ್ಲಿದ್ದ ಹಣ, ಬಂಗಾರದ ಜೊತೆ ಪತ್ನಿ, ಮಕ್ಕಳು, ಅತ್ತೆ ನಾಪತ್ತೆ
author img

By

Published : Mar 13, 2021, 10:03 PM IST

ಮಂಗಳೂರು : ಮೂಡುಬಿದಿರೆ ತಾಲೂಕಿನಲ್ಲಿ ಒಂದೇ ಮನೆಯ ಐವರು ಸದಸ್ಯರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಗರದ ಮೂಡುಬಿದಿರೆ ತಾಲೂಕಿನ ಕಾರಿಂಜೆಯ ಸುವರ್ಣನಗರ ನಿವಾಸಿ ಜ್ಯೋತಿ ಮಣಿ (36) ಹಾಗೂ ಅವರ ಮಕ್ಕಳಾದ ದೆಬೋರ (11), ಜುಡಾ ಇಮಾನ್ವೇಲ್ (10), ಎಪ್ಸಿಬಾ (8) ಹಾಗೂ ತಾಯಿ ಮನೋರಂಜಿತಂ (56) ಎಂಬುವರು ನಾಪತ್ತೆಯಾದವರು.

ಸುವರ್ಣನಗರ ನಿವಾಸಿ ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ ಎಂಬುವರು ಮಾ.10ರಂದು ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, ಎಪ್ಸಿಬಾ ಹಾಗೂ ಅತ್ತೆ ಮನೋರಂಜಿತಂ ಜತೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಜಯರಾಜ್ ಶೇಖರ್ ದೂರು ನೀಡಿದ್ದು, ಮನೆಯಲ್ಲಿದ್ದ ಬಂಗಾರದ ಆಭರಣ ಮತ್ತು 1.40 ಲಕ್ಷ ರೂ. ನಗದನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಜ್ಯೋತಿಮಣಿ ಪತಿಯ ಗಮನಕ್ಕೆ ಬಾರದಂತೆ ತನ್ನ ಚಿನ್ನದೊಡವೆಗಳನ್ನು ಫೈನಾನ್ಸ್‌ವೊಂದರಲ್ಲಿ ಅಡ ಇಟ್ಟಿದ್ದರು. ಇದರಿಂದ ಬಂದ 1.80 ಲಕ್ಷ ರೂ. ಸ್ನೇಹಿತರೊಬ್ಬರಿಗೆ ನೀಡಿದ್ದರು. ಅಡ ಇಟ್ಟಿರುವ ಒಡವೆಗಳನ್ನು ಬಿಡಿಸಿಕೊಂಡು ಬರುವಂತೆ ಜಯರಾಜ್ ಶೇಖರ್ ಅವರು ಸೂಚಿಸಿದ ಬೆನ್ನಲ್ಲೇ ಜ್ಯೋತಿಮಣಿ ಮನೆಯಿಂದ ಪರಾರಿಯಾಗಿದ್ದಾರೆ. ಮಹಿಳೆಯು ತನ್ನ ತವರು ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಮಗುಚಿ ಬಿದ್ದ ಟ್ಯಾಂಕರ್​​​: ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಜನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.