ETV Bharat / state

ಮಂಗಳೂರಿನಲ್ಲಿ ವಾರಾಂತ್ಯದ ಕರ್ಫ್ಯೂ: ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ - Weekend curfew

ಮಂಗಳೂರಿನಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಕಠಿಣ ವೀಕೆಂಡ್​​ ಕರ್ಫ್ಯೂ ಇರುವುದರಿಂದ ಬಿಗಿ ತಪಾಸಣೆ ಮಾಡಲಾಗುತ್ತಿದೆ. ಪೊಲೀಸರು ಆಯಕಟ್ಟಿನ‌ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯ ಸಂಚಾರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ವಾಹನ ಸೀಜ್​​ ಮಾಡುತ್ತಿದ್ದಾರೆ..

Mangalore
ಪೊಲೀಸ್ ಆಯುಕ್ತ ಶಶಿಕುಮಾರ್ ಎನ್
author img

By

Published : Jun 26, 2021, 2:30 PM IST

Updated : Jun 26, 2021, 2:46 PM IST

ಮಂಗಳೂರು : ವಾರಾಂತ್ಯದ ಕರ್ಫ್ಯೂಗೆ ಮಂಗಳೂರು ನಗರ ಭಾಗದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ನಗರ ಹೊರ ಭಾಗದಲ್ಲಿ ಜನರ ಓಡಾಟ ನಡೆಸುತ್ತಿದ್ದು, ಆ ಪ್ರದೇಶಗಳಲ್ಲಿಯೂ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.

ಪೊಲೀಸ್ ಆಯುಕ್ತ ಶಶಿಕುಮಾರ್. ಎನ್

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ‌ನಿನ್ನೆ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್​​​ಗಳನ್ನು ಹಾಕಿ ಬಂದೋಬಸ್ತ್​​ ಮಾಡುತ್ತಿದ್ದಾರೆ. ಸರ್ಕಾರದ ಆದೇಶಕ್ಕೆ ಜನರು ಸರಿಯಾಗಿ ಸ್ಪಂದನೆ ನೀಡಿದಲ್ಲಿ ಜನ ಜೀವನ ಆದಷ್ಟು ಶೀಘ್ರದಲ್ಲಿ ಯಥಾಸ್ಥಿತಿಗೆ ಬರಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದರು.

ಕಳೆದ ಒಂದೂವರೆ ತಿಂಗಳಿನಿಂದ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಶೇ99.9ರಷ್ಟು ಜನರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಶೇ1ರಷ್ಟು ಜನರಿಂದ ಲಾಕ್‌ಡೌನ್ ನಿಯಮಾವಳಿಗಳು ಮತ್ತೆ ಮುಂದುವರಿಯುತ್ತಿದ್ದು, ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪೊಲೀಸರು, ಸರ್ಕಾರದ ಆದೇಶಕ್ಕಿಂತ ಹೆಚ್ಚಾಗಿ ಅನಗತ್ಯ ಸಂಚಾರ ಮಾಡುವವರನ್ನು ಮನೆಯಲ್ಲಿ ಪೋಷಕರೇ ತಡೆಯುವಂತಾಗಬೇಕು. ಕಾನೂನಿಂದ ಮಾತ್ರ ಕೊರೊನಾ ತಡೆಯಬಹುದು ಎನ್ನುವ ಸುಳ್ಳು. ನಮ್ಮ ಜವಾಬ್ದಾರಿಗಳನ್ನು ನಾವು ಅರಿತುಕೊಳ್ಳಬೇಕು ಎಂದರು.

ಮಾದಕ ವಸ್ತು ನಾಶ..

ಮಾದಕ ವಸ್ತು ನಾಶ: ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 50 ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ 130 ಕೆಜಿ ಗಾಂಜಾ, 68 ಗ್ರಾಂ ಎಂಡಿಎಂಎ ಮಾತ್ರೆಗಳು, 41 ಸ್ಟ್ರಿಪ್ ಎಲ್ಎಸ್‌ಡಿ, 18 ಎಂಎಲ್ ಕೊಕೇನ್, 18 ಎಂಎಲ್ ಗ್ರಾಂ ಬ್ರೌನ್‌ ಶುಗರ್ ಅನ್ನು ಇಂದು ನಗರದ ಮುಲ್ಕಿ ಕೊಲ್ನಾಡ್ ಜಂಕ್ಷನ್​​ನಲ್ಲಿ ನಾಶಪಡಿಸಲಾಯಿತು.

ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಅಂತಾರಾಷ್ಟ್ರೀಯ ಮಾದಕ ವಸ್ತು ನಿರ್ಮೂಲನಾ ದಿನದ ನಿಮಿತ್ತ ರಾಜ್ಯಾದ್ಯಂತ ಡಿಜಿಪಿ ಪ್ರವೀಣ್ ಸೂದ್ ನಿರ್ದೇಶನದಂತೆ ವಿವಿಧ ಠಾಣೆಗಳಲ್ಲಿರುವ ಮಾದಕ ವಸ್ತುಗಳನ್ನು ಇಂದು ನಾಶ ಮಾಡಲಾಗುತ್ತದೆ.

ಇದರಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳು, ತನಿಖೆಯಲ್ಲಿ ಇರುವ ಪ್ರಕರಣಗಳು, ವಿಚಾರಣೆಯಾಗಿರುವಂತಹ ಪ್ರಕರಣಗಳು ಸೇರಿ ಮಾದಕ ವಸ್ತುಗಳ ನಾಶ ಮಾಡುವ ಸಮಿತಿ‌ ಮಾಡಲಾಗಿದೆ. ಈ ಮೂಲಕ ನ್ಯಾಯಾಲಯದ ಅನುಮತಿ ಮೇರೆಗೆ ಮಾದಕ ವಸ್ತುಗಳ ನಾಶಕ್ಕೆ ಇಂದು ಅವಕಾಶ ಇದೆ ಎಂದರು.

ಮನೆಯಲ್ಲಿ ಅಥವಾ ಹೊರಗಡೆ ಯಾರೇ ಮಾದಕ ವಸ್ತುಗಳ ಸಾಗಣೆ ಮಾಡುತ್ತಿರುವ ಬಗ್ಗೆ ತಿಳಿದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸಾಕಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ವರ್ಷ 214 ರಷ್ಟು ಮಾದಕ ವಸ್ತು ಪ್ರಕರಣಗಳನ್ನು ಪತ್ತೆ ಹಚ್ಚಿ 300 ರಷ್ಟು ಡ್ರಗ್ ಪೆಡ್ಲರ್​​ಗಳು, ಗಾಂಜಾ ಸೇವನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ‌ ಎಂದರು.

ನಿರ್ದಾಕ್ಷಿಣ್ಯ ಕ್ರಮ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಕಠಿಣ ವೀಕೆಂಡ್​​ ಕರ್ಫ್ಯೂ ಇರುವುದರಿಂದ ಬಿಗಿ ತಪಾಸಣೆ ಮಾಡಲಾಗುತ್ತಿದೆ. ಪೊಲೀಸರು ಆಯಕಟ್ಟಿನ‌ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯ ಸಂಚಾರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ವಾಹನ ಸೀಜ್​​ ಮಾಡುತ್ತಿದ್ದಾರೆ.

ಕರ್ಫ್ಯೂ ಹಿನ್ನೆಲೆ ಮೆಡಿಕಲ್, ಹಾಲಿನ ಬೂತ್, ಸರ್ಕಾರಿ ಕಚೇರಿಗಳಿಗೆ ಕಾರ್ಯಾಚರಿಸಲು ಮಾತ್ರ ಅವಕಾಶ ನೀಡಲಾಗಿದೆ. ‌ಹಾಗೆಯೇ ತುರ್ತು ಅಗತ್ಯ ಇದ್ದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.

Last Updated : Jun 26, 2021, 2:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.