ಮಂಗಳೂರು: ಇಲ್ಲಿನ ಸಮುದ್ರ ತೀರದಲ್ಲಿ ಹೂಳು ತೆಗೆಯುವ ಡ್ರೆಡ್ಜರ್ವೊಂದಕ್ಕೆ ನೀರು ಒಳನುಗ್ಗಿದ ಪರಿಣಾಮ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ತ್ರಿದೇವಿ ಪ್ರೇಮ್ ಎಂಬ ಡ್ರೆಡ್ಜರ್ ಕೆಟ್ಟು ನಿಂತಿತ್ತು. ಈ ಡ್ರೆಡ್ಜರ್ಗೆ ರಾತ್ರಿ 2.30ರ ವೇಳೆಗೆ ಸಮುದ್ರದ ನೀರು ಒಳನುಗ್ಗಲು ಆರಂಭಿಸಿದ್ದು, ಡ್ರೆಡ್ಜರ್ನಲ್ಲಿದ್ದ 13 ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ರಕ್ಷಣಾ ಬೋಟ್ ಐಸಿಜಿಎಸ್ ಅಮರ್ತ್ಯ ರಕ್ಷಣಾ ಕಾರ್ಯ ಆರಂಭಿಸಿ ಡ್ರೆಡ್ಜರ್ನಲ್ಲಿದ್ದ 13 ಮಂದಿಯನ್ನು ರಕ್ಷಿಸಲಾಗಿದೆ.