ETV Bharat / state

ಪಚ್ಚನಾಡಿಯ ತ್ಯಾಜ್ಯ ರಾಶಿ ಕುಸಿತ...!ಸಮಾಧಿಯಾಗಲಿದೆ ಮಂದಾರವೆಂಬ ಪುಟ್ಟ ಊರು

ಮಂಗಳೂರು ನಗರದ ತ್ಯಾಜ್ಯ ವಿಲೇವಾರಿ ಘಟಕವಾದ ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವು ಕುಸಿದು ಮಂದಾರ ಎಂಬ ಜನವಸತಿ ಪ್ರದೇಶದಲ್ಲಿ ಗಬ್ಬು ನಾರುತ್ತಿದ್ದು ಜನರು ನಲುಗಿ ಹೋಗುವಂತಾಗಿದೆ. ಇದರಿಂದಾಗಿ ಮಾರು 20 ಎಕರೆ ಕೃಷಿ ಭೂಮಿ ಹಾಳಾಗಿದೆ.

ತ್ಯಾಜ್ಯ ವಿಲೇವಾರಿ ಘಟಕವಾದ ಪಚ್ಚನಾಡಿ
author img

By

Published : Aug 14, 2019, 11:33 PM IST

ಮಂಗಳೂರು: ನಗರದ ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವು ಕುಸಿದು ಕುಡುಪು ಸಮೀಪದ ಮಂದಾರ ಎಂಬ ಜನವಸತಿ ಪ್ರದೇಶದಲ್ಲಿ ಮನೆಗಳು-ಕೃಷಿಭೂಮಿಗಳನ್ನು ಹೂತು ಹಾಕುತ್ತಿರುವ ಘಟನೆ ಮತ್ತೆ ಮುಂದುವರಿಯುತ್ತಿದೆ.

ವಾರದ ಹಿಂದೆ ಸುರಿದ ಮಹಾಮಳೆಗೆ ಈ ತ್ಯಾಜ್ಯ ರಾಶಿಯ ಪರ್ವತ ಕುಸಿಯಲಾರಂಭಿಸಿದೆ. ಬಳಿಕ ಇದು ನಿಲ್ಲಲೇ ಇಲ್ಲ. ಸುಮಾರು 20 ಎಕರೆ ಕೃಷಿ ಭೂಮಿ, ಮೂರು ಮನೆಗಳು 12,500 ಸಾವಿರ ಅಡಿಕೆ ಗಿಡಗಳು, 1,500 ಸಾವಿರ ತೆಂಗಿನ ಗಿಡಗಳು, 10,000 ಕರಿಮೆಣಸಿನ ಗಿಡಗಳು, ಇನ್ನಿತರ ಹಲಸು, ಮಾವು, ತೇಗ, ಹೆಬ್ಬಲಸು ಎಂದು ಹಲವಾರು ಮರಗಳನ್ನು ಈ ತ್ಯಾಜ್ಯರಾಶಿ ತನ್ನೊಳಗೆ ಆಹುತಿ ತೆಗೆದುಕೊಂಡು ಮತ್ತೆ ಸುಮಾರು 15 ಮೀಟರ್ ನಷ್ಟು ಮುಂದಕ್ಕೆ ಬಂದಿದೆ. ಈ ತ್ಯಾಜ್ಯದ ಭೀಕರ ಅಟ್ಟಹಾಸಕ್ಕೆ ಮಂದಾರವೆಂಬ ಪುಟ್ಟ ಊರು ಅಕ್ಷರಶಃ ನಲುಗಿ ಹೋಗಿದೆ.

ಈ ತ್ಯಾಜ್ಯರಾಶಿಯ ರೌದ್ರತೆಗೆ ಬೆದರಿದ ಸಮೀಪದ ನಿವಾಸಿಗಳು ಈಗಾಗಲೇ ಮನೆ ಖಾಲಿ ಮಾಡಿ ಸ್ಥಳಾಂತರಗೊಂಡಿದ್ದಾರೆ‌. ಅಲ್ಲದೆ ಯಾವಾಗ ತಮ್ಮ ಮನೆಗಳೂ ಈ ಕಸದ ರಾಶಿಗಳೊಳಗೆ ಸಮಾಧಿಯಾಗಿಬಿಡುತ್ತದೋ ಎಂಬ ಭೀತಿಯಲ್ಲಿದ್ದಾರೆ. ಇಡೀ ಪರಿಸರವು ದುರ್ನಾತದಿಂದ ಕೂಡಿದ್ದು, ನೊಣಗಳು, ಸೊಳ್ಳೆಗಳ ಕಾಟದಿಂದ ಇಲ್ಲಿನ ಜನರು ತತ್ತರಗೊಂಡಿದ್ದಾರೆ. ಜೊತೆಗೆ ಇಲ್ಲಿನ ಬಾವಿಗಳು ಪೂರ್ತಿ ಕೆಟ್ಟುಹೋಗಿದ್ದು, ದಿನಬಳಕೆಗೆ ಬಳಸಲು ಅಯೋಗ್ಯವಾಗಿದೆ. ಅಲ್ಲದೆ ತ್ಯಾಜ್ಯರಾಶಿಯಿಂದ ಬರುವ‌ ಕೊಳಚೆ ನೀರು ಅಲ್ಲಿಯೇ ಸಮೀಪದಲ್ಲಿರುವ ಡ್ಯಾಮ್ ಗೆ ಹರಿದುಹೋಗುತ್ತಿದೆ‌. ಮುಂದಕ್ಕೆ ಇದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ.

ತ್ಯಾಜ್ಯ ವಿಲೇವಾರಿ ಘಟಕವಾದ ಪಚ್ಚನಾಡಿ

ಇಂದು ಮಧ್ಯಾಹ್ನ ಈ ಮಂದಾರ ಪರಿಸರಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿಯವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪಚ್ಚನಾಡಿಯ ಈ ಡಂಪಿಗ್ ಯಾರ್ಡ್ ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತವಾಗಿ 20-25 ಮನೆಗಳಿಗೆ ಹಾನಿಯಾಗಿದೆ‌. ಇದರಿಂದ ಈ ಭಾಗದ ಜನರಿಗೆ ಬಹಳಷ್ಟು ಸಮಸ್ಯೆಗಳಾಗಿವೆ. ಕಳೆದ ಆರೇಳು ವರ್ಷಗಳ ನಿರ್ವಹಣೆಯ ವ್ಯವಸ್ಥೆಯಲ್ಲಿ ಕೊರತೆಗಳು ಕಂಡಿಲ್ಲ. ಸಮರ್ಪಕ ವೈಜ್ಞಾನಿಕ ದಾರಿಯನ್ನು ಕಂಡುಹಿಡಿಯದ ಕಾರಣ ಅಲ್ಲದೆ ಹಿಂದಿನ ರಾಜ್ಯ ಸರಕಾರ ಇದಕ್ಕೊಂದು ವ್ಯವಸ್ಥಿತ ಪದ್ಧತಿಯನ್ನು ಅನುಷ್ಠಾನ ಗೊಳಿಸದೆ ಇರುವುದರಿಂದ, ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನ ಹರಿಸದೇ ಇರುವುದರಿಂದ ಹಾಗೂ ಮೇಯರ್ ಗಳು ಇದಕ್ಕೊಂದು ಪರಿಕಲ್ಪನೆ ಇರಿಸಿಕೊಂಡು ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಲ್ಲ. ಇದೆಲ್ಲಾ ಕೊರತೆಯಿಂದ ಇಲ್ಲಿನ ಜನರು ಸಂತ್ರಸ್ತರಾಗಿದ್ದಾರೆ‌. ಇದೊಂದು ಮಾನವ ನಿರ್ಮಿತ ಸಮಸ್ಯೆ. ಆದ್ದರಿಂದ, ಅಧಿಕಾರಿಗಳು, ಸರಕಾರ, ಸಚಿವರು ಎಲ್ಲರೂ ಹೊಣೆ ಎಂದು ಹೇಳಿದರು.

ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಾಳೆ ಜಿಲ್ಲಾಧಿಕಾರಿ ಯವರು ಒಂದು ತಂಡವನ್ನು ಕಳುಹಿಸುತ್ತಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಜನಗಳಿಗೆ ತೊಂದರೆಯಾಗದ ರೀತಿ ಪರಿಣಾಮಕಾರಿಯಾದ ಶಾಶ್ವತ ಪರಿಹಾರ ಕೊಡುವ ಉದ್ದೇಶದಿಂದ ಬೇರೆ ಬೇರೆ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ನಾನು‌, ನಮ್ಮ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಮತ್ತೊಮ್ಮೆ ಬಂದಿದ್ದೇವೆ. ಇದನ್ನೆಲ್ಲವನ್ನೂ ಪರಿಶೀಲನೆ ನಡೆಸಿ, ನಾಳೆ ಬರುವ ತಂಡದ ವರದಿಗಳನ್ನು ನೋಡಿ ಪೂರಕವಾಗಿರುವ ಯೋಜನೆಗಳನ್ನು ಹಾಕಿ‌ ಈಗ ಆಗಿರುವಂತಹ ಹಾನಿಯನ್ನು ಹೇಗೆ ಸಮರ್ಪಕವಾಗಿ ಸರಿದಾರಿಗೆ ತರಬಹುದು, ಜನರಿಗೆ ಆಗಿರುವಂತಹ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಯೋಚನೆಯನ್ನು ಮಾಡುತ್ತೇವೆ ಎಂದರು.

ಸ್ಥಳೀಯ ಮಂದಾರ ರಾಜೇಶ್ ಭಟ್ ಮಾತನಾಡಿ, ಆಗಸ್ಟ್ 6ರಿಂದ ಇಲ್ಲಿನ ತ್ಯಾಜ್ಯ ರಾಶಿಯ ಅವಾಂತರದಿಂದ ಮಂದಾರವೆಂಬ ಸಣ್ಣ ಊರು ಸರ್ವನಾಶವಾಗಿದೆ. ನಿನ್ನೆಯಿಂದ ಮತ್ತೆ ಈ ತ್ಯಾಜ್ಯರಾಶಿಯ ಕುಸಿತ ಆರಂಭವಾಗಿದ್ದು, ಸುಮಾರಷ್ಟು ಕೃಷಿಭೂಮಿಗಳು ನಾಶವಾಗಿದೆ. ಒಟ್ಟಾರೆಯಾಗಿ 20 ಎಕರೆಗಿಂತಲೂ ಅಧಿಕ ಭೂಮಿ ನಾಶವಾಗಿದೆ. ಇದು ಮಂಗಳೂರು ಮನಪಾದ ಬೇಜವಾಬ್ದಾರಿಯಿಂದ ಆದ ಅವೈಜ್ಞಾನಿಕ ತ್ಯಾಜ್ಯ ರಾಶಿ ಘಟಕದಿಂದ ಆದ ಘಟನೆ. ಇಲ್ಲಿ ನೊಣ, ಸೊಳ್ಳೆಗಳ ಹಾವಳಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಇಲ್ಲಿನ ಸುಮಾರು 26 ಕುಟುಂಬಗಳು ಅಕ್ಷರಶಃ ನಾಶವಾಗಿದೆ. ಇಲ್ಲಿನ ಈ ಕುಟುಂಬಗಳನ್ನು ಕುಲಶೇಖರದ ಕರ್ನಾಟಕ ಗೃಹ ಮಂಡಳಿಯ ವಸತಿ ಸಂಕೀರ್ಣಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ತ್ಯಾಜ್ಯ ರಾಶಿ ಕುಸಿತ ಇಲ್ಲಿಗೆ ನಿಂತಿಲ್ಲ ಮುಂದುವರಿಯುತ್ತಲೇ ಇದೆ. ಇಲ್ಲಿನ ಕೊಳಚೆ ನೀರು ಹಲವಾರು ಕೆರೆ, ನದಿಗಳನ್ನು ಸೇರುತ್ತಿದೆ. ಅರ್ಧ ಮಂಗಳೂರು ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಲಿದೆ ಎಂದು ಹೇಳಿದರು.

Intro:Byte

ಬಿಳಿ ಅಂಗಿ ಮಂದಾರ ರಾಜೇಶ್ ಭಟ್

ಆ್ಯಶ್ ಕಲರ್ ಅಂಗಿ ನಳಿನ್ ಕುಮಾರ್

Body:ವಿಡೀಯೊConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.