ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ನಡೆದ ಮದುವೆ ವಿಶಿಷ್ಟತೆ ಸಾಕ್ಷಿಯಾಯಿತು. ನವ ವಧು-ವರರು ಮದುವೆ ಮಂಟಪದಲ್ಲಿಯೇ ಮತದಾನ ಜಾಗೃತಿ ಮೂಡಿಸಿದರು.
ಇಂದು ಮದುವೆಯಾದ ಸಂತೋಷ್ ಬಂಗೇರ ಮತ್ತು ಪ್ರಮೀಳಾ ಎಂಬ ವಧು-ವರ ಮದುವೆಯ ಶಾಸ್ತ್ರ ಮುಗಿದ ಬಳಿಕ ಮಂಟಪದಲ್ಲಿ ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ಮತದಾನ ಮಾಡುವಂತೆ ಮದುವೆಗೆ ಬಂದ ಸಭಿಕರೆಲ್ಲರಿಗೂ ಜಾಗೃತಿ ಮೂಡಿಸಿದವರು.
ನಾಳೆ ನಡೆಯುವ ಮತದಾನ ಸಂದರ್ಭ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸುವಂತೆ ನವದಂಪತಿ ಮನವಿ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು.