ETV Bharat / state

ವಿನಾಯಕ ಬಾಳಿಗಾ ಕೊಲೆ ಪ್ರಕರಣ: 6 ವರ್ಷಗಳ ಬಳಿಕ ವಿಚಾರಣೆ ಆರಂಭ - mangaluru district court

2016ರಲ್ಲಿ ಮಂಗಳೂರಿನಲ್ಲಿ ನಡೆದ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ- ಸರ್ಕಾರ ನೇಮಿಸಿದ ವಿಶೇಷ ಅಭಿಯೋಜಕರಾದ ವಕೀಲ ಎಸ್. ಬಾಲಕೃಷ್ಣನ್ ಸರ್ಕಾರದ ಪರ ವಾದ- ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಆರೋಪಿಗಳು ಹಾಜರು.

vinayak-baliga-murder-case-trial-begins-after-6-years
ವಿನಾಯಕ ಬಾಳಿಗಾ ಕೊಲೆ ಪ್ರಕರಣ: 6 ವರ್ಷಗಳ ಬಳಿಕ ವಿಚಾರಣೆ ಆರಂಭ
author img

By

Published : Jan 5, 2023, 9:04 PM IST

Updated : Jan 5, 2023, 9:30 PM IST

ಮಂಗಳೂರು: ನಗರದ ಕಲಾಕುಂಜ ಬಳಿ 2016ರ ಮಾರ್ಚ್ 21 ರಂದು ನಡೆದ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ವಿಚಾರಣೆ ಆರು ವರ್ಷದ ಬಳಿಕ ಮತ್ತೆ ಆರಂಭವಾಗಿದೆ. ಆರ್​ಟಿಐ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗ ಅವರನ್ನು 2016ರ ಮಾರ್ಚ್ 21 ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಇದೀಗ 6 ವರ್ಷಗಳ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.

ಪ್ರಕರಣವು ಮಂಗಳೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ಸರ್ಕಾರ ನೇಮಿಸಿದ ವಿಶೇಷ ಅಭಿಯೋಜಕರಾದ ವಕೀಲ ಎಸ್. ಬಾಲಕೃಷ್ಣನ್ ಅವರು ಸರ್ಕಾರದ ಪರವಾಗಿ ವಾದಿಸುತ್ತಿದ್ದಾರೆ. ಜನವರಿ 3 ರಿಂದ 5ರ ತನಕ‌ ಮೊದಲ ಹಂತದ ಸಾಕ್ಷಿದಾರರ ವಿಚಾರಣೆ ನಡೆಯಿತು. ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಮೊದಲ ಆರೋಪಿ ನರೇಶ್ ಶೆಣೈ,‌ ಎರಡನೇ ಆರೋಪಿ ಶ್ರೀಕಾಂತ್, ಮೂರನೇ ಆರೋಪಿ ಶಿವಪ್ರಸಾದ್ ಯಾನೆ ಶಿವ ಯಾನೆ ಶಿವಪ್ರಸನ್, ನಾಲ್ಕನೇ ಆರೋಪಿ ವಿನಿತ್ ಪೂಜಾರಿ, ಐದನೇ ಆರೋಪಿ ನಿಷಿತ್ ದೇವಾಡಿಗ, ಆರನೇ ಆರೋಪಿ ಶೈಲೇಶ್ ಯಾನೆ ಶೈಲು, ಏಳನೇ ಆರೋಪಿ ಮಂಜುನಾಥ್ ಶೆಣೈ ಯಾನೆ ಮಂಜು ಅವರನ್ನು ವಿಚಾರಣೆ ನಿಮಿತ್ತ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ವಿನಾಯಕ ಬಾಳಿಗಾ
ವಿನಾಯಕ ಬಾಳಿಗಾ

ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಯ ಮೊದಲ ದಿನದ ವಿಚಾರಣೆಯಲ್ಲಿ ಸಾಕ್ಷಿಗಳಾದ ಚೇತನ್ ಕಾಮತ್, ಭಾಮಿ ಸುಧಾಕರ್ ಶೆಣೈ, ರಾಯಿ ಗಣಪತಿ ಬಾಳಿಗಾ, ಚಂದ್ರಕಾಂತ್ ಕಾಮತ್ ಮತ್ತು ವಿಶ್ವನಾಥ್ ಕಾಮತ್ ರವರ ಸಾಕ್ಷಿ ವಿಚಾರಣೆ ನಡೆಯಿತು. ಎರಡನೇ ದಿನದಲ್ಲಿ ಸಾಕ್ಷಿಗಳಾದ ಕಾರ್ತಿಕ್ ಪೈ, ಮೊಹಮ್ಮದ್ ಹರ್ಷಾದ್, ದಿನೇಶ್ ಬಾಳಿಗಾ, ರಾಧಾ, ಸುಲಕ್ಷಣ, ಸೂಜಿರ್ ಬಾಲಕೃಷ್ಣ ಶೆಣೈ, ರಾಜೇಶ್ ಶೆಟ್ಟಿ, ಪದ್ಮನಾಭ ಮೂಲ್ಯ, ದೀಕ್ಷಿತ್ ಶೆಟ್ಟಿ ಅವರು ಸಾಕ್ಷಿ ವಿಚಾರಣೆಗೆ ಹಾಜರಾದರು. ಆರೋಪಿಗಳ ಪೈಕಿ ವಿಘ್ನೇಷ್ ನಾಯಕ್ ಎಂಬಾತ 2020 ನವೆಂಬರ್ ನಲ್ಲಿ ತನ್ನ ಮನೆಯಲ್ಲಿ ‌ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಹಿನ್ನೆಲೆ: 2016ರ ಮಾರ್ಚ್​ 21ರಂದು ಮಂಗಳೂರಿನ ವೆಂಕಟರಮಣ ದೇವಸ್ಥಾನದ ಸಮೀಪ ವಿನಾಯಕ ಬಾಳಿಗ ಅವರನ್ನು ತಮ್ಮ ಮನೆಯ ಮುಂದೆಯೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಕುರಿತು ಅನುರಾಧ ಬಾಳಿಗಾ ನೀಡಿದ ದೂರಿನ ಅನ್ವಯ ಬರ್ಕೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಯುವ ಬ್ರಿಗೇಡ್​ನ ನಾಯಕ ನರೇಶ್​ ಶಣೈ ಮತ್ತು ಇನ್ನಿತರರನ್ನು ಬಂಧಿಸಿದ್ದರು.

2019ರಲ್ಲಿ ವಿನಾಯಕ ಬಾಳಿಗ ಕೊಲೆ ಪ್ರಕರಣವನ್ನು ಮಂಗಳೂರು ಜಿಲ್ಲಾ ನ್ಯಾಯಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ​ತಡೆ ಹಿಡಿಯುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆರೋಪಿ ನರೇಶ್​ ಶೆಣೈ ಸಲ್ಲಿಸಿದ್ದ ಮಧ್ಯಂತರ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಾಡಿದ ವಕೀಲರು ಪ್ರಕರಣದಲ್ಲಿ ನರೇಶ್​ ಅವರ ಪಾತ್ರವಿಲ್ಲ ಎಂದು ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: ವಿನಾಯಕ ಬಾಳಿಗಾ ಕೊಲೆ ಪ್ರಕರಣ: ವಿಶೇಷ ಅಭಿಯೋಜಕರಾಗಿ ವಕೀಲ ಬಾಲಕೃಷ್ಣನ್ ನೇಮಕ

Last Updated : Jan 5, 2023, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.