ಮೂರು ದಿನಗಳ ಹಿಂದೆ ಕಾಂಕ್ರಿಟೀಕರಣಗೊಂಡ ರಸ್ತೆಯಲ್ಲಿ ಬಿರುಕು, ಸಾರ್ವಜನಿಕರ ಆಕ್ರೋಶ - Resources
ಮಂಜನಾಡಿ ಇಸ್ಮಾಯಿಲ್ ವಲೀಯುಲ್ಲಾಹಿ ದರ್ಗಾ ಸಮೀಪ ಹೊಸದಾಗಿ ಕಾಂಕ್ರಿಟೀಕರಣಗೊಂಡ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕಳಪೆ ಕಾಮಗಾರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ (ಮಂಗಳೂರು): ಮಂಜನಾಡಿ ಇಸ್ಮಾಯಿಲ್ ವಲೀಯುಲ್ಲಾಹಿ ದರ್ಗಾ ಸಮೀಪ ಹೊಸದಾಗಿ ಕಾಂಕ್ರಿಟೀಕರಣಗೊಂಡ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳಪೆ ಕಾಮಗಾರಿಯ ಪರಿಣಾಮ ಇದು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಜನಾಡಿ ಕುಚ್ಚುಗುಡ್ಡೆಯಿಂದ ದರ್ಗಾ ಸಂಪರ್ಕಿಸುವ ರಸ್ತೆ ಮೂರು ದಿನಗಳ ಹಿಂದಷ್ಟೇ ಕಾಂಕ್ರಿಟೀಕರಣಗೊಂಡಿತ್ತು. ಆದರೆ ರಸ್ತೆಯಲ್ಲಿ ಜಲ್ಲಿಗಳು ಏಳುತ್ತಿದ್ದು, ಆರಂಭಿಕ ಹಂತದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಗುತ್ತಿಗೆದಾರ, ತಾನು ಗುತ್ತಿಗೆ ವಹಿಸಿಕೊಂಡ ಕೆಲಸವನ್ನು ಉಪಗುತ್ತಿಗೆ ವಹಿಸಿಕೊಂಡಿರುವ ವ್ಯಕ್ತಿ ಕಳಪೆಯಾಗಿ ಕಾಮಗಾರಿ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರ ಜೊತೆಗೆ ಮಾತುಕತೆ ನಡೆಸಿ ರಸ್ತೆ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದರು.