ಮಂಗಳೂರು: ದೇವಸ್ಥಾನವೊಂದರ ದೈವಾರಾಧನೆಗೆ ಬಂದಿದ್ದ ದೈವಪಾತ್ರಿ ಸಲಿಂಗಕಾಮ ನಡೆಸಿದ ಆರೋಪದ ಮೇಲೆ ಆತನ ಮೇಲೆ ಭಕ್ತರೇ ಹಲ್ಲೆ ನಡೆಸಿದ ವಿಡಿಯೋವೊಂದು ವೈರಲ್ ಆಗಿದೆ.
ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಲೋಕೇಶ್ ಪೂಜಾರಿ ಹಲ್ಲೆಗೊಳಗಾದ ದೈವಪಾತ್ರಿ. ಈತನ ಮೇಲೆ ಸಲಿಂಗಕಾಮದ ಆರೋಪ ಹೊರಿಸಿ ಹಲ್ಲೆ ಮಾಡಲಾಗಿದೆ. ದೈವಪಾತ್ರಿಗಳು ಸಾಮಾನ್ಯವಾಗಿ ಉದ್ದ ಕೂದಲು ಬಿಡುತ್ತಾರೆ. ಅದನ್ನು ಆಕ್ರೋಶಿತರು ಬಲವಂತವಾಗಿ ಕತ್ತರಿಸಿದ್ದಾರೆ.
ಇನ್ನು ದೈವ ಪಾತ್ರಿಯ ಕೈಯಲ್ಲಿ ಇರುವ ಕಡಗ (ಬಳೆ) ವನ್ನು ತೆಗೆಸಿ ಅಲ್ಲಿಯೇ ಇದ್ದ ದೇವರ ಡಬ್ಬಿಗೆ ಹಾಕಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.