ಮಂಗಳೂರು: ಸದಾ ಜನಪರ ಕಾರ್ಯಗಳ ಮೂಲಕ ಜನರ ಮನಗೆಲ್ಲುತ್ತಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಇದೀಗ ಮತ್ತೆ ಒಂದೊಳ್ಳೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಬುಧವಾರ ಶಾಸಕ ವೇದವ್ಯಾಸ ಕಾಮತ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಶಾಸಕರ ಎಫ್ಬಿ ಪೋಸ್ಟ್ ಇಂತಿದೆ.
"ಮಂಗಳೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರಿಸುವ ಅಗತ್ಯವಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಗರದ ಹೋಟೆಲ್ನಲ್ಲಿ ಪಾರ್ಸೆಲ್ ಮಾಡುವ ವೇಳೆ ಸಾಧ್ಯವಿರುವ ಆಹಾರವನ್ನು ಪ್ಲಾಸ್ಟಿಕ್ ಬದಲಿಗೆ ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ನೀಡಿದರೆ ಉತ್ತಮ."
- " class="align-text-top noRightClick twitterSection" data="">
"ತುಳುನಾಡಿನ ತಿಂಡಿಗಳು ಅತ್ಯಂತ ಪ್ರಸಿದ್ಧಿಯಾಗಿದೆ. ಈ ತಿಂಡಿಗಳು ಘಮ ಸಹ ಅಷ್ಟೇ ಜನಪ್ರಿಯ. ಹೀಗಾಗಿ ಪಾರ್ಸೆಲ್ ನೀಡುವ ಸಂದರ್ಭದಲ್ಲಿ ಬಾಳೆ ಎಲೆಯಲ್ಲಿ ತಿಂಡಿಯನ್ನು ಪ್ಯಾಕ್ ಮಾಡಿದರೆ ತಿಂಡಿ ರುಚಿಕರವಾಗಿರುತ್ತದೆ" ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದಿದ್ದಾರೆ. ತಮ್ಮ ಪೋಸ್ಟ್ ಕೊನೆಯಲ್ಲಿ ಪ್ರಮುಖ ಆನ್ಲೈನ್ ಆಹಾರ ವಿತರಣಾ ಸಂಸ್ಥೆಗಳಾದ ಜೊಮ್ಯಾಟೋ ಹಾಗೂ ಸ್ವಿಗ್ಗಿಯನ್ನು ಉಲ್ಲೇಖ ಮಾಡಿದ್ದರು.
ಸದ್ಯ ಶಾಸಕರ ಪೋಸ್ಟ್ಗೆ ಸ್ವಿಗ್ಗಿ ಪ್ರತಿಕ್ರಿಯೆ ನೀಡಿದ್ದು, "ಇದು ನಿಜಕ್ಕೂ ಅದ್ಭುತ ಸಲಹೆ. ನಮ್ಮ ರೆಸ್ಟೋರೆಂಟ್ಗಳಿಗೆ ಈ ವಿಚಾರವನ್ನು ತಿಳಿಸುತ್ತೇವೆ. ಖಂಡಿತಾ ಇದನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದ್ದೇವೆ ಎಂದಿದೆ."
ಸ್ವಿಗ್ಗಿ ರಿಪ್ಲೈಗೆ ಪ್ರತಿಕ್ರಿಯೆ ನೀಡಿರುವ ವೇದವ್ಯಾಸ್ ಕಾಮತ್, "ಆದಷ್ಟು ಬೇಗ ಕಾರ್ಯಗತಗೊಳಿಸಿ, ಜೊತೆಗೆ ಕಾರ್ಯರೂಪಕ್ಕೆ ಬಂದಾಗ ದಯವಿಟ್ಟು ತಿಳಿಸಿ" ಎಂದಿದ್ದಾರೆ.