ಮಂಗಳೂರು: ಎರಡು ದಿನಗಳ ಕರಾವಳಿ ಪ್ರವಾಸದಲ್ಲಿದ್ದ ಪಾಂಡಿಚೇರಿ ಸಿಎಂ ವಿ.ನಾರಾಯಣ ಸ್ವಾಮಿ ಇಂದು ಮಧ್ಯಾಹ್ನ ವಾಪಸ್ ತವರಿಗೆ ತೆರಳಿದರು.
ನಿನ್ನೆ ಸಂಜೆ ಉಡುಪಿ ಜಿಲ್ಲೆಯ ಕೊಲ್ಲೂರಿಗೆ ಆಗಮಿಸಿದ್ದ ಅವರು ಇಂದು ಬೆಳಗ್ಗೆ ಕೊಲ್ಲೂರು ದೇವಾಲಯದಲ್ಲಿ ದರ್ಶನ ಪಡೆದು ವಾಪಸ್ ತೆರಳಿದ್ದಾರೆ. ಇಂದು ಬೆಳಿಗ್ಗೆ ಕೊಲ್ಲೂರು ದೇವಾಲಯ ಭೇಟಿ ಬಳಿಕ ಅವರು ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಾಲಯ ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಟೀಲು ಭೇಟಿ ಕಾರ್ಯಕ್ರಮ ರದ್ದುಗೊಂಡಿದೆ.
ಇನ್ನು ಪಾಂಡಿಚೇರಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಮುಂಚೆ ಮಾಜಿ ಶಾಸಕ ಮೊಯ್ದಿನ್ ಬಾವ ಮನೆಗೆ ತೆರಳಿ ಲಘು ಉಪಹಾರ ಸೇವಿಸಿದ ಅವರು, ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಊಟ ಮುಗಿಸಿ ಪಾಂಡಿಚೇರಿಗೆ ಮರಳಿದ್ದಾರೆ.