ETV Bharat / state

ಮಿಥುನ್​​ ರೈಗೆ ಮತ ಹಾಕಿದರೆ ಹನುಮಾನ್​ ಚಾಲೀಸ​​ ಪುಣ್ಯ ಸಿಗುತ್ತೆ: ಖಾದರ್​​ - Lok Sabha constituency

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಿದ್ದರೆ, ಇತ್ತ ಕಾಂಗ್ರೆಸ್​ನಿಂದ ಮೈತ್ರಿ ಅಭ್ಯರ್ಥಿಯಾಗಿ ಮಿಥುನ್ ರೈ ಕಣದಲ್ಲಿದ್ದಾರೆ. ಇವರಿಬ್ಬರ ನಡುವಿನ ಮತಬೇಟೆ ಜೋರಾಗಿದೆ.

ಮೈತ್ರಿ ಅಭ್ಯರ್ಥಿಗೆ ಮತದಾನ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಮನವಿ
author img

By

Published : Apr 11, 2019, 5:16 PM IST

ಮಂಗಳೂರು: ಚುನಾವಣಾ ಭಾಷಣದಲ್ಲಿ ಹನುಮಾನ್​​ ಚಾಲೀಸ್ ಪಠಣ (ಆಂಜನೇಯ ಮಂತ್ರ) ಮಾಡುವ ಕಾಂಗ್ರೆಸ್​ ಅಭ್ಯರ್ಥಿ ಮಿಥುನ್ ರೈ ಅವರಿಗೆ ಮತ ನೀಡಿದರೆ ಆ ಹನುಮಾನ್ ಚಾಲೀಸ್ ಪುಣ್ಯ ಮತ ನೀಡಿದವರಿಗೆಲ್ಲಾ ಸಿಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಮೈತ್ರಿ ಅಭ್ಯರ್ಥಿಗೆ ಮತದಾನ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮನವಿ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರು ಬಾಲ್ಯದಿಂದಲೂ ಹನುಮಾನ್ ಚಾಲೀಸ​ ಕಂಠ ಪಾಠ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್​ನವರದು ನಿಜವಾದ ಮತ್ತು ಉತ್ತಮ ಹಿಂದುತ್ವ ಎನ್ನುವುದಕ್ಕೆ ಇವರೇ ಸಾಕ್ಷಿ. ಆದರೆ, ಬಿಜೆಪಿ ರಾಜಕೀಯಕ್ಕಾಗಿ ಹಿಂದುತ್ವ ಬಗ್ಗೆ ಮಾತನಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರದಲ್ಲಿ ಹಗರಣಗಳು ಕಂಡುಬಂದ ತಕ್ಷಣವೇ ಆ ಬಗ್ಗೆ ಶಿಸ್ತುಕ್ರಮ ತೆಗೆದುಕೊಂಡ ಉದಾಹರಣೆಗಳಿವೆ. ಆದರೆ, ಬಿಜೆಪಿ ಸರ್ಕಾರದಲ್ಲಿ ರಫೇಲ್​ ಹಗರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಲು ಸುಪ್ರೀಂಕೋರ್ಟಿಗೆ ನೀಡಲಾಗಿದೆ. ಸುಪ್ರೀಂಕೋರ್ಟ್ ಕೂಡ ದಾಖಲೆಗಳನ್ನು ಕೇಳಿದಾಗ ಅದು ಕಳೆದು ಹೋಗಿದೆ ಎನ್ನುತ್ತಾರೆ. ಇದು ಎಂತಹ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:reporter- vinodpudu

ಮಂಗಳೂರು; ಚುನಾವಣಾ ಭಾಷಣದಲ್ಲಿ ಹನುಮಾನ್ ಚಾಲೀಸ್ ಪಟ್ಟಣ ಮಾಡುವ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆಗೆ ಮತ ನೀಡಿದರೆ ಹನುಮಾನ್ ಚಾಲೀಸ್ ಪುಣ್ಯ ಮತ ನೀಡಿದವರಿಗೆ ಸಿಗುತ್ತದೆ ಎಂದು ದ ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಿಥುನ್ ರೈ ಬಾಲ್ಯದಿಂದಲೂ ಹನುಮಾನ್ ಚಾಲೀಸ್ ಕಂಠ ಪಾಠ ಕಲಿತುಕೊಂಡಿದ್ದಾರೆ. ಕಾಂಗ್ರೆಸ್ನವರು ನಿಜವಾದ ಮತ್ತು ಉತ್ತಮ ಹಿಂದುತ್ವ. ಆದರೆ ಬಿಜೆಪಿ ರಾಜಕೀಯಕ್ಕಾಗಿ ಹಿಂದುತ್ವ ಬಗ್ಗೆ ಮಾತನಾಡುತ್ತಿದ್ದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಸ್ವಾಮಿ ವಿವೇಕಾನಂದ ರಾಮಕೃಷ್ಣ ಪರಮಹಂಸ ನಾರಾಯಣ ಗುರುಗಳು ಅವರ ಹಿಂದುತ್ವವನ್ನು ಗೌರವಿಸುತ್ತದೆ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಹಗರಣಗಳನ್ನು ನಡೆದಾಗ ಪಕ್ಷ ತಕ್ಷಣವೇ ಶಿಸ್ತು ಕ್ರಮ ತೆಗೆದುಕೊಂಡಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ರಫೇಲ್ ಹಗರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಲು ಸುಪ್ರೀಂ ಕೋರ್ಟಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಕೂಡ ದಾಖಲೆಗಳನ್ನು ಕೇಳಿದಾಗ ಅದು ಕಳೆದು ಹೋಗಿದೆ ಎನ್ನುತ್ತಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಬೈಟ್ ಯು ಟಿ ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.