ETV Bharat / state

ಕಟೀಲ್ ಆಡಿಯೋ ವೈರಲ್ ಬಗ್ಗೆ ಸಿಎಂ ಸ್ಪಷನೆ ನೀಡಲಿ: ಯು ಟಿ ಖಾದರ್ ಆಗ್ರಹ - ut khadar reaction on katil audio

ನಳಿನ್ ಕುಮಾರ್ ಕಟೀಲ್ ಅವರು ಆಡಿಯೋ ನಕಲಿ ಎಂದು ಹೇಳಿದ್ದಾರೆ. ಆಡಿಯೋ ನಕಲಿಯೋ ಅಸಲಿಯೋ ಎಂಬುದನ್ನು ಸಿಎಂ ಬಿ ಎಸ್​ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಬೇಕು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು ಟಿ ಖಾದರ್​ ಹೇಳಿದ್ರು.

ut khadar reaction on nalin kumar katil viral audio
ಮಾಜಿ ಸಚಿವ ಯು ಟಿ ಖಾದರ್ ಸುದ್ದಿಗೋಷ್ಟಿ
author img

By

Published : Jul 20, 2021, 1:42 PM IST

ಮಂಗಳೂರು; ಸಿಎಂ ಬದಲಾವಣೆ ಬಗ್ಗೆ ವೈರಲ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಆಡಿಯೋ ನಕಲಿ ಎಂದು ಹೇಳಿದ್ದಾರೆ. ಆಡಿಯೋ ನಕಲಿಯೋ - ಅಸಲಿಯೋ ಎಂಬುದನ್ನು ಸಿಎಂ ಅವರು ಹೇಳಲಿ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ. ಮುಖ್ಯಮಂತ್ರಿಗಳು ಮುಂದುವರಿಯುತ್ತಾರೆ ಅಥವಾ ಇಲ್ಲವೇ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಲಿ. ಅನಗತ್ಯವಾಗಿ ಜನರಲ್ಲಿ ಗೊಂದಲವನ್ನು ಮೂಡಿಸುವುದು ಬೇಡ ಎಂದು ಅವರು ಹೇಳಿದರು.

ಮಾಜಿ ಸಚಿವ ಯು ಟಿ ಖಾದರ್ ಸುದ್ದಿಗೋಷ್ಟಿ

ಕಾಂಗ್ರೆಸ್​​ನಲ್ಲಿ ಎರಡು ಬಣ ಇಲ್ಲ:

ನಮ್ಮಲ್ಲಿರುವುದು ಒಂದೇ ಬಣ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಕಾರಣದಿಂದ ಕಾಂಗ್ರೆಸ್​​​​ನಲ್ಲಿ ಮುಖ್ಯಮಂತ್ರಿ ವಿಚಾರದ ಬಗ್ಗೆ ಚರ್ಚೆಗಳಾಗುತ್ತಿವೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹೈಕಮಾಂಡ್ ಹೇಳುವ ಹೇಳಿಕೆಗೆ ಮಾತ್ರ ಮಹತ್ವ ನೀಡಬೇಕು. ಮುಂದಿನ ಸಿಎಂ ವಿಚಾರದಲ್ಲಿ ಇತರರು ನೀಡುವ ಹೇಳಿಕೆಗೆ ಮಹತ್ವ ಕೊಡಬಾರದು ಎಂದು ಅವರು ಹೇಳಿದರು.

ಯಂಗ್ ಇಂಡಿಯಾ:

ಜನಸಂಖ್ಯೆ ನಿಯಂತ್ರಣ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡುವ ಬಗ್ಗೆ ಸರಕಾರಗಳು ಚಿಂತಿಸಬೇಕು. ಭಾರತ ದೇಶವನ್ನು ಯಂಗ್ ಇಂಡಿಯಾ ಎನ್ನುತ್ತಾರೆ. ಇಲ್ಲಿರುವ ಯುವಜನತೆ ಇದಕ್ಕೆ ಕಾರಣ. ಚೀನಾ ಹಿಂದೆ ಒಂದು ಮಕ್ಕಳು ಸಾಕು ಎಂಬ ನಿಯಂತ್ರಣ ಮಾಡಿ ಇದೀಗ ಮೂರು ಮಕ್ಕಳು ಇರಬಹುದು ಎಂದು ಆದೇಶಿಸಿದೆ. ಉತ್ತರಪ್ರದೇಶ ಚುನಾವಣೆ ಗೆಲ್ಲಲು ಈಗ ಹೊಸ ವಿಚಾರವನ್ನು ಇವರು ಪ್ರಸ್ತಾಪಿಸಿದ್ದಾರೆ ಎಂದರು.

ಲಸಿಕೆ ನೀಡುವುದರಲ್ಲಿ ಸರಕಾರ ವಿಫಲ:

ಪ್ರಧಾನಮಂತ್ರಿಗಳು ಉಚಿತ ಲಸಿಕೆ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದರೂ ಜನರಿಗೆ ಸರಿಯಾಗಿ ಲಸಿಕೆ ಸಿಗುತ್ತಿಲ್ಲ. ಜನರಿಗೆ ಲಸಿಕೆ ನೀಡಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿಲ್ಲ. ವಾರಕ್ಕೆ 50ಸಾವಿರ ಲಸಿಕೆಯಷ್ಟೆ ಜಿಲ್ಲೆಗೆ ಬರುತ್ತಿದೆ. ವಾರಕ್ಕೆ ಒಂದೂವರೆ ಲಕ್ಷ ಲಸಿಕೆಯಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಬರಬೇಕು. ಇದರ ಬಗ್ಗೆ ಸರ್ಕಾರ ಚಿಂತಿಸಲಿ ಎಂದರು.

ಕಡಲ್ಕೊರೆತ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಬಂದರೂ ಅಧಿಕಾರಿ, ಸಚಿವರು ಬಂದು ಸಭೆ ನಡೆಸಿ ಪರಿಹಾರಕ್ರಮಕ್ಕೆ ಸೂಚಿಸಿದರೂ ಅದನ್ನು ಅನುಷ್ಠಾನ ಮಾಡಲು ಸರಕಾರ ವಿಫಲವಾಗಿದೆ ಎಂದು ಯು ಟಿ ಖಾದರ್​ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.