ETV Bharat / state

ಉಳ್ಳಾಲ : ಮನೆಗಳ ಗೇಟ್​ನಲ್ಲಿ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿಪತ್ರ, ಪುಸ್ತಕಗಳು ಪತ್ತೆ

ಪತ್ರದಲ್ಲಿರುವ ಮೊಬೈಲ್ ನಂಬರಿನಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌. ಮತಾಂತರ ನಡೆಸುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ..

christianity evoking poster, books in house gate
ಮನೆಗಳ ಗೇಟ್​ನಲ್ಲಿ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿಪತ್ರ, ಪುಸ್ತಕಗಳು ಪತ್ತೆ
author img

By

Published : Sep 24, 2021, 6:41 PM IST

ಉಳ್ಳಾಲ : ಸೋಮೇಶ್ವರದಲ್ಲಿರುವ ರೈಲ್ವೆ ನಿಲ್ದಾಣದ ಹಿಂಭಾಗಲ್ಲಿರುವ ಮನೆಗಳ ಗೇಟ್​​​ಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಿನ ಜಾವ ಅಪರಿಚಿತ ವ್ಯಕ್ತಿಯೊಬ್ಬ 15ಕ್ಕೂ ಅಧಿಕ ಮನೆಗಳ ಗೇಟ್​ಗಳಲ್ಲಿ ಕ್ರೈಸ್ತ ಧರ್ಮದ ವಿಚಾರಗಳ ಕುರಿತ ಭಿತ್ತಿಪತ್ರ, ಎರಡು ಪುಸ್ತಕಗಳನ್ನು ಇಟ್ಟು ಹೋಗಿದ್ದಾನೆ. ಇವು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

christianity evoking poster, books in house gate
ಮನೆಗಳ ಗೇಟ್​ನಲ್ಲಿ ಪತ್ತೆಯಾದ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿಪತ್ರ, ಪುಸ್ತಕಗಳು

ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದೆ. ಪತ್ರದಲ್ಲಿರುವ ಮೊಬೈಲ್ ನಂಬರಿನಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌. ಮತಾಂತರ ನಡೆಸುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಉಳ್ಳಾಲ ಠಾಣಾ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 1ರಿಂದ ಮಕ್ಕಳ ಜೊತೆಗೆ ಧರಣಿ ಕೂರುವೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.