ETV Bharat / state

ಕಲಿತ ವಿದ್ಯೆ ಜೀವನದಲ್ಲಿ ಅಳವಡಿಸಿಕೊಂಡ್ರೆ ಗುರು-ಶಿಷ್ಯ ಸಂಬಂಧ ಭದ್ರ : ಪ್ರೊ. ಹೆಚ್ ಡಿ ನಾರಾಯಣಸ್ವಾಮಿ - University of Karnataka Veterinary and Fisheries Sciences Teachers day celebration

ಕೊರೊನಾ ಸೋಂಕಿನಿಂದ ಶಾಲಾ-ಕಾಲೇಜುಗಳ ಕಾರ್ಯ ಸ್ಥಗಿತವಾಗಿರುವ ಈ ಸಂದರ್ಭದಲ್ಲಿ ನೂತನ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಪಾಠ ಪ್ರವಚನ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ..

ಶಿಕ್ಷಕರ ದಿನಾಚರಣೆ
ಶಿಕ್ಷಕರ ದಿನಾಚರಣೆ
author img

By

Published : Sep 7, 2020, 9:45 PM IST

ಮಂಗಳೂರು: ಗುರು-ಶಿಷ್ಯರ ಸಂಬಂಧ ಭದ್ರವಾಗಿರಬೇಕಾದ್ರೆ ವಿದ್ಯಾರ್ಥಿಯಾದಾಗ ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದಿಂದ ಪಡೆದ ಜ್ಞಾನವೇ ಆಸ್ತಿ. ಜೊತೆಗೆ ಕಲಿಸಿದ ಗುರು ಮತ್ತು ಗುರುಕುಲದ ಚರಿತ್ರೆ ಮೆಲುಕು ಹಾಕುತ್ತಿರಬೇಕು ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಕುಲಪತಿ ಪ್ರೊ. ಹೆಚ್ ಡಿ ನಾರಾಯಣಸ್ವಾಮಿ ಹೇಳಿದರು.

ಜೂಮ್​ ಕ್ಲೌಡ್​ ಆ್ಯಪ್ ಮೂಲಕ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ನಡೆಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಇಂದಿನ ತಲೆಮಾರಿನ ಶಿಕ್ಷಕರ ಆದ್ಯತೆ ಹೇಗಿರಬೇಕೆಂದು ವಿಶ್ಲೇಷಿಸಿದರು.

ಕೊರೊನಾ ಸೋಂಕಿನಿಂದ ಶಾಲಾ-ಕಾಲೇಜುಗಳ ಕಾರ್ಯ ಸ್ಥಗಿತವಾಗಿರುವ ಈ ಸಂದರ್ಭದಲ್ಲಿ ನೂತನ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಪಾಠ ಪ್ರವಚನ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದರು. ವಿವಿ ಕುಲಸಚಿವ ಪ್ರೊ.ಕೆ ಸಿ ವೀರಣ್ಣ, ಭಾರತರತ್ನ ಪ್ರೊ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚಾರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುದುಚೇರಿ ರಾಜೀವ್ ಗಾಂಧಿ ಪಶುವೈದ್ಯಕೀಯ ಶಿಕ್ಷಣ ಮತ್ತು ಸಂಶೋದನಾ ಸಂಸ್ಥೆಯ ಡೀನ್ ಪ್ರೊ.ಎಸ್ ರಾಮ್‌ಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಹೆಚ್ ಸಿ ಇಂದ್ರೇಶ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಎ ಟಿ ರಾಮಚಂದ್ರ ನಾಯ್ಕ್, ಉಪಾಧ್ಯಕ್ಷ ಡಾ.ಬಿ ಸಿ ಗಿರೀಶ್, ಖಜಾಂಚಿ ಪ್ರೊ. ಎಸ್ ಗಂಗಾನಾಯ್ಕ್ ಮತ್ತಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.