ಮಂಗಳೂರು: ಎರಡು ವರ್ಷ ನಾಲ್ಕು ತಿಂಗಳು ವಯಸ್ಸಿನ ಮಗುವಿನ ಕೂದಲನ್ನು ಪೋಷಕರು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮರೋಳಿಯ ಸುಮಲತಾ ಮತ್ತು ಭರತ್ ಕುಲಾಲ್ ಎಂಬುವರ ಪುತ್ರಿ ಆದ್ಯ ಕುಲಾಲ್ ಎಂಬ ಮಗುವಿನ ಕೂದಲನ್ನು ದಾನ ಮಾಡಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ತನ್ನ ಕೂದಲನ್ನು ದಾನ ಮಾಡಿರುವ ಈ ಮಗು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತಾದ ಸುದ್ದಿಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
![hair donate for cancer patients](https://etvbharatimages.akamaized.net/etvbharat/prod-images/kn-mng-06-hair-donate-photo-7202146_22102022154101_2210f_1666433461_1060.jpg)
ಇದನ್ನೂ ಓದಿ: ಕ್ಯಾನ್ಸರ್ ಪೀಡಿತರಿಗೆ ಉದ್ದವಾದ ಕೇಶರಾಶಿ ದಾನ ಮಾಡಿದ ಯುವತಿ
'ಆದ್ಯ ಕುಲಾಲ್ ಎಂಬ ಮಗುವಿನ ಧೈರ್ಯ ಮತ್ತು ಆಸಕ್ತಿಯನ್ನು ನೋಡಿ ನಾನು ನಿಜವಾಗಿಯೂ ಭಾವುಕನಾದೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದರು. ಈ ಮೂಲಕ ಸಮಾಜಕ್ಕೆ ಮಾದರಿಯಾಗುವ ಜೊತೆಗೆ ಅನೇಕರನ್ನು ಪ್ರೇರೇಪಿಸಿದರು. ಶ್ರೀಮತಿ ಸುಮಲತಾ ಮತ್ತು ಶ್ರೀ ಭರತ್ ಕುಲಾಲ್ ಅವರು ತಮ್ಮ ಹೆಮ್ಮೆಯ ಪುತ್ರಿಯನ್ನು ಸರಿಯಾಗಿ ಬೆಳೆಸುತ್ತಿದ್ದೀರಿ. ಮುಂದೆ ಅವಳು ಬೆಳೆದು ದೊಡ್ಡವಳಾದಾಗ ಈ ಬಗ್ಗೆ ತಿಳಿದುಕೊಂಡು ಸಂತೋಷಪಡುತ್ತಾಳೆ' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗ್ ಯುವಕ..