ಬಂಟ್ವಾಳ: ವಿಟ್ಲದಲ್ಲಿ ಬಾಲಕಿಯರ ಮೇಲೆ ಹಲ್ಲೆ ನಡೆದ ಘಟನೆಯ ಮುಂದುವರೆದ ಭಾಗವಾಗಿ ಇಬ್ಬರ ಬಂಧನವಾಗಿದೆ. 17 ವರ್ಷದ ಬಾಲಕಿ ಅಪಹರಣ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಂಶೀರ್ (21) ಹಾಗೂ ಕನ್ಯಾನ ಸಾಜಿದ್ (22) ಎಂಬಿಬ್ಬರನ್ನು ಬಂಧಿಸಲಾಗಿದೆ.
17 ವರ್ಷದ ಬಾಲಕಿಯು ಅಡ್ಯನಡ್ಕಕ್ಕೆ ತೆರಳಿದ್ದು, ಅಲ್ಲಿಂದ ಸಾಮಾಜಿಕ ಜಾಲತಾಣವಾದ ಇನ್ಸ್ಸ್ಟಾಗ್ರಾಂನಲ್ಲಿ ಪರಿಚಯವಾದ ಕನ್ಯಾನ ಮೂಲದ ಸಾಜಿದ್ ಆಕೆಯನ್ನು ಅಜ್ಞಾತ ಜಾಗದಲ್ಲಿ ಇರಿಸಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮತ್ತೋರ್ವ ಆರೋಪಿ ಸಂಶೀರ್ ಅದೇ ಬಾಲಕಿಯನ್ನು ಪ್ರೀತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ತಿಳಿದುಬಂದಿದೆ.
ಅಕ್ಟೋಬರ್ 10ರಂದು ಇಬ್ಬರು ಬಾಲಕಿಯರ ಮೇಲೆ ತಪ್ಪು ಗ್ರಹಿಕೆಯಿಂದ ವಿಟ್ಲದಲ್ಲಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿತ್ತು. ಬಾಲಕಿಯರು ದೂರು ನೀಡದ ಹಿನ್ನೆಲೆಯಲ್ಲಿ ಕರೈ ನಿವಾಸಿ ಮಹಮ್ಮದ್ ಆಸಿಫ್ ಎಂಬಾತನ ಮೇಲೆ ಸಾರ್ವಜನಿಕ ಶಾಂತಿಭಂಗ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಶಾಫಿ ತಪ್ಪಿಸಿಕೊಂಡಿದ್ದು, ವಿಟ್ಲ ಠಾಣೆ ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾನೂನಿನ ಕಣ್ಣಿಗೆ ಮಣ್ಣೆರಚಿದ ಯುವತಿ.. ಸುಳ್ಳು ರೇಪ್ ಕೇಸ್ ಹಾಕಿದ ಮೂವರಿಗೆ ಜೈಲು ಶಿಕ್ಷೆ