ಚಾಮರಾಜನಗರ: ಜಾತ್ರೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುದೇರು ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ವಸಂತ ಹಾಗೂ ಜ್ಯೋತಿ ಬಂಧಿತರು. ಹಾಸನ ಮೂಲದ ನಾಗರತ್ನ ತಲೆ ಮರೆಸಿಕೊಂಡಿದ್ದು, ಈಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜಾತ್ರೆಗಳು ನಡೆಯುತ್ತಿರುವ ವೇಳೆ ಆರೋಪಿಗಳು ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 10 ಪ್ರಕರಣ ಹಾಗೂ ತುಮಕೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಇವರ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ.
ಕಳೆದ ಮೂರು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ಓಡಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಮತ್ತೋರ್ವಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಶಾಸಕ ದತ್ತು ಪಡೆದ ಶಾಲೆಯಲ್ಲೇ ಇಲ್ಲ ಶೌಚಾಲಯ: ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿ
ಕುದೇರು ಪಿಎಸ್ಐ ಹನುಮಂತ ಉಪ್ಪಾರ್ ನೇತೃತ್ವದ ತಂಡ ಇವರಿಬ್ಬರನ್ನು ಶಿವಮೊಗ್ಗದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.