ETV Bharat / state

ಗಾಂಜಾ ಸೇವನೆ, ಸಾರ್ವಜನಿಕರಿಗೆ ತೊಂದರೆ ಆರೋಪ: ಇಬ್ಬರು ಪೊಲೀಸ್ ವಶಕ್ಕೆ

ಸಾರ್ವಜನಿಕರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಗಾಂಜಾ ಸೇವಿಸಿದ ಆರೋಪದಲ್ಲಿರುವ ಇಬ್ಬರು ವ್ಯಕ್ತಿಗಳನ್ನು ಗಸ್ತುವಿನಲ್ಲಿದ್ದ ಪೊಲೀಸರ ತಂಡ ಬಂಧಿಸಿದ ಘಟನೆ ವಿಟ್ಲ ಸಮೀಪ ಮಂಗಲಪದವಿನಲ್ಲಿ ನಡೆದಿದೆ.

Two arrested for disturbing the public
ಗಾಂಜಾ ಸೇವನೆ, ಸಾರ್ವಜನಿಕರಿಗೆ ತೊಂದರೆ ಆರೋಪ: ಇಬ್ಬರು ಪೊಲೀಸ್ ವಶಕ್ಕೆ
author img

By

Published : Sep 8, 2020, 8:53 PM IST

ಬಂಟ್ವಾಳ : ಸಾರ್ವಜನಿಕರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗಸ್ತಿನಲ್ಲಿದ್ದ ಪೊಲೀಸರ ತಂಡ ಬಂಧಿಸಿದ ವೇಳೆ ಅವರು ಗಾಂಜಾ ಸೇವಿಸಿದ್ದಾರೆ ಎನ್ನಲಾಗಿದ್ದು, ಇದೀಗ ಇಬ್ಬರನ್ನೂ ಬಂಧಿಸಲಾಗಿದೆ.

ಘಟನೆ ವಿಟ್ಲ ಸಮೀಪ ಮಂಗಲಪದವಿನಲ್ಲಿ ನಡೆದಿದೆ. ಮೇಗಿನಪೇಟೆ ನಿವಾಸಿ ಮೊಹಮ್ಮದ್ ಅಶ್ರಫ್ (26), ಮೊಹಮ್ಮದ್ ಅರೀಫ್ (27) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಲಪದವಿನ ಸಾರ್ವಜನಿಕ ಸ್ಥಳದಲ್ಲಿ ಅನಗತ್ಯವಾಗಿ ಗಲಾಟೆ ಮಾಡಿಕೊಂಡು ಇತರರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪ ಇವರ ಮೇಲಿದೆ. ಈ ಸಂದರ್ಭ ಪೊಲೀಸ್ ಉಪನಿರೀಕ್ಷಕ ರಾಜೇಶ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನ, ವಿನಾಯಕ ಅವರು ಗಸ್ತು ವಾಹನದಲ್ಲಿ ಅಲ್ಲಿಗೆ ಹೋಗಿದ್ದು, ಅನುಮಾನ ಬಂದು ವಶಕ್ಕೆ ಪಡೆಯಲಾಗಿದೆ.

ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿದ ಸಂದರ್ಭ ಗಾಂಜಾ ಸೇವನೆ ದೃಢ ಪಟ್ಟ ಹಿನ್ನಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.