ETV Bharat / state

ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ - ಸಂಸದ ನಳಿನ್ ಕುಮಾರ್ ಕಟೀಲು

ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಮತ್ತೆ ಗರಿಗೆದರಿದೆ. ದಶಕದ ಬೇಡಿಕೆಗೆ ಈಗ ಮತ್ತೆ ಮರುಜೀವ ಬಂದಿದೆ. 'ಜೈ ತುಳುನಾಡು' ಎಂಬ ಸಂಘಟನೆಯು ಶನಿವಾರ ಹಮ್ಮಿಕೊಂಡ ಟ್ವಿಟರ್ ಅಭಿಯಾನಕ್ಕೆ ವಿವಿಧ ಸಂಘಟನೆಗಳು, ಶಾಸಕರು, ಸಂಸದರು, ಗಣ್ಯರು ಹಾಗೂ ಸಿನಿಮಾ ನಟರು ಬೆಂಬಲ ನೀಡಿದ್ದಾರೆ. ಇದರಿಂದ ಆದಷ್ಟು ಬೇಗ ತುಳು ಭಾಷೆಗೆ ಮಾನ್ಯತೆ ಸಿಗಬಹುದೆಂಬ ಮುನ್ಸೂಚನೆ ಕಾಣುತ್ತಿದೆ.

ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ
author img

By

Published : Sep 10, 2019, 3:08 AM IST

ಮಂಗಳೂರು: ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಮತ್ತೆ ಗರಿಗೆದರಿದೆ. ದಶಕದ ಬೇಡಿಕೆಗೆ ಈಗ ಮತ್ತೆ ಮರುಜೀವ ಬಂದಿದೆ. 'ಜೈ ತುಳುನಾಡು' ಎಂಬ ಸಂಘಟನೆಯು ಶನಿವಾರ ಹಮ್ಮಿಕೊಂಡ ಟ್ವಿಟರ್ ಅಭಿಯಾನಕ್ಕೆ ವಿವಿಧ ಸಂಘಟನೆಗಳು, ಶಾಸಕರು, ಸಂಸದರು, ಗಣ್ಯರು ಹಾಗೂ ಸಿನಿಮಾ ನಟರು ಬೆಂಬಲ ನೀಡಿದ್ದಾರೆ. ಇದರಿಂದ ಆದಷ್ಟು ಬೇಗ ತುಳು ಭಾಷೆಗೆ ಮಾನ್ಯತೆ ಸಿಗಬಹುದೆಂಬ ಮುನ್ಸೂಚನೆ ಕಾಣುತ್ತಿದೆ.

twitter campaign
ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ

ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಜೈ ತುಳುನಾಡು ಸಂಸ್ಥೆ ಈಗಾಗಲೇ ಮೂರು ಬಾರಿ ಟ್ವಿಟರ್ ಅಭಿಯಾನ ನಡೆಸಿತ್ತು. ಮೊದಲ ಬಾರಿ ಕಡಿಮೆ ಪ್ರೋತ್ಸಾಹ ದೊರೆತರೂ ಬಳಿಕ ಲಕ್ಷಾಂತರ ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಯನ್ನು ಸಾಂವಿಧಾನಿಕ ಭಾಷೆಯಾಗಿಸಲು ಪ್ರೋತ್ಸಾಹಿಸಿದ್ದಾರೆ‌.ಈ ಬಾರಿಯ ಟ್ವಿಟರ್ ಅಭಿಯಾನವು ಸೆ.7ರ ತಡರಾತ್ರಿ 12 ರಿಂದ ಸೆ.8ರ ತಡರಾತ್ರಿ 12 ರವರೆಗೆ ನಡೆಯಿತು. ಈ ಮೂಲಕ ಸುಮಾರ ಲಕ್ಷಾಂತರ ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.

twitter campaign
ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗೆ ಮಾಡಿದ ಟ್ವಿಟರ್ ಅಭಿಯಾನಕ್ಕೆ ಸೆಲೆಬ್ರೆಟಿಗಳ ಬೆಂಬಲ

ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಕರಾವಳಿಯ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ರಘುಪತಿ ಭಟ್, ಸುನೀಲ್ ಕುಮಾರ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ, ನಟರಾದ ಜಗ್ಗೇಶ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರೂಪೇಶ್ ಶೆಟ್ಟಿ ಮುಂತಾದವರು ಟ್ವಿಟ್ ಮಾಡಿದ್ದಾರೆ.

ತುಳು ಭಾಷೆಯನ್ನು ಸಾಂವಿಧಾನಿಕ ಭಾಷೆಯಾಗಿ ಮಾನ್ಯತೆ ಮಾಡಲು ಟ್ವಿಟರ್ ಅಭಿಯಾನ

ಅಲ್ಲದೆ ಈ ಟ್ವಿಟನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಂತಾದವರಿಗೆ ಟ್ಯಾಗ್ ಮಾಡಲಾಗಿದೆ.

Intro:ಮಂಗಳೂರು: ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಮತ್ತೆ ಗರಿಗೆದರಿದೆ. ದಶಕದ ಬೇಡಿಕೆಗೆ ಈಗ ಮತ್ತೆ ಮರುಜೀವ ಬಂದಿದೆ. 'ಜೈ ತುಳುನಾಡು' ಎಂಬ ಸಂಘಟನೆಯು ಶನಿವಾರ ಹಮ್ಮಿಕೊಂಡ ಟ್ವಿಟರ್ ಅಭಿಯಾನಕ್ಕೆ ವಿವಿಧ ಸಂಘಟನೆಗಳು, ಶಾಸಕರು, ಸಂಸದರು, ಗಣ್ಯರು ಹಾಗೂ ಸಿನಿಮಾ ನಟರು ಬೆಂಬಲ ನೀಡಿದ್ದಾರೆ. ಇದರಿಂದ ಆದಷ್ಟು ಬೇಗ ತುಳು ಭಾಷೆಗೆ ಮಾನ್ಯತೆ ಸಿಗಬಹುದೆಂಬ ಮುನ್ಸೂಚನೆ ಕಾಣುತ್ತಿದೆ.

ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಜೈ ತುಳುನಾಡು ಸಂಸ್ಥೆ ಈಗಾಗಲೇ ಮೂರು ಬಾರಿ ಟ್ವಿಟರ್ ಅಭಿಯಾನ ನಡೆಸಿತ್ತು. ಮೊದಲಬಾರಿ ಕಡಿಮೆ ಪ್ರೋತ್ಸಾಹ ದೊರೆತರೂ ಬಳಿಕ ಲಕ್ಷಾಂತರ ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಯನ್ನು ಸಾಂವಿಧಾನಿಕ ಭಾಷೆಯಾಗಿಸಲು ಪ್ರೋತ್ಸಾಹಿಸಿದ್ದಾರೆ‌.

Body:ಈ ಬಾರಿಯ ಟ್ವಿಟರ್ ಅಭಿಯಾನವು ಸೆ.7ರ ತಡರಾತ್ರಿ 12 ರಿಂದ ಸೆ.8ರ ತಡರಾತ್ರಿ 12 ರವರೆಗೆ ನಡೆಯಿತು. ಈ ಮೂಲಕ ಸುಮಾರ ಲಕ್ಷಾಂತರ ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಕರಾವಳಿಯ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ರಘುಪತಿ ಭಟ್, ಸುನೀಲ್ ಕುಮಾರ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ, ನಟರಾದ ಜಗ್ಗೇಶ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರೂಪೇಶ್ ಶೆಟ್ಟಿ ಮುಂತಾದವರು ಟ್ವಿಟ್ ಮಾಡಿದ್ದಾರೆ. ಅಲ್ಲದೆ ಈ ಟ್ವಿಟನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಂತಾದವರಿಗೆ ಟ್ಯಾಗ್ ಮಾಡಲಾಗಿದೆ.

ಈ ಬಗ್ಗೆ 'ಜೈ ತುಳುನಾಡು' ಸಂಘಟನೆಯ ಸದಸ್ಯ ಅಶ್ವತ್ಥ್ ತುಳುವ ಮಾತನಾಡಿ, ಈ ಬಾರಿ ನಾವು ತುಳುವನ್ನು ಕೇರಳ ಮತ್ತು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡಿದರೆ 8ನೇ ಪರಿಚ್ಛೇದಕ್ಕೆ ಸೇರಿಸುವುದು ಸುಲಭ. ಈ ನಿಟ್ಟಿನಲ್ಲಿ ಈಬಾರಿ ನಾವು ತುಳುವನ್ನು ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಅಧಿಕೃತ ಭಾಷೆಯನ್ನಾಗಿ ಸರಕಾರ ಅಂಗೀಕಾರ ಮಾಡಲು ಟ್ವಿಟರ್ ಅಭಿಯಾನ ನಡೆಸಿದ್ದೆವು.‌ ನಾವು ನಿರೀಕ್ಷೆ ಮಾಡಿರುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ತುಳು ಭಾಷಿಗರು, ಅಭಿಮಾನಿಗಳು, ನಟರು, ರಾಜಕಾರಣಿಗಳು, ವಿದ್ವಾಂಸರು ಬೆಂಬಲಿಸಿದ್ದಾರೆ ಎಂದು ಹೇಳಿದರು.

Conclusion:ತುಳು ಭಾಷೆಗೆ ಮಾನ್ಯತೆ ದೊರಕಬೇಕೆಂದು ಸುಮಾರು ಐದು ವರ್ಷಗಳಿಂದ ಬೇರೆ ಬೇರೆ ವಿಧಾನಗಳಿಂದ ನಮ್ಮ 'ಜೈ ತುಳುನಾಡು' ಸಂಘಟನೆಯ ಮೂಲಕ ಪ್ರಯತ್ನ ಪಡುತ್ತಲೇ ಇದ್ದೇವೆ. ಪ್ರತಿಭಟನೆ, ಮೂರು ಬಾರಿ ಟ್ವಿಟರ್ ಅಭಿಯಾನ ನಡೆಸಿ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದಿದ್ದೇವೆ. ಈ ಬಾರಿ ಬಹಳಷ್ಟು ಮಂದಿ ಜನಪ್ರತಿನಿಧಿಗಳು, ನಟರು, ಯುವಕರು, ತುಳು ವಿದ್ವಾಂಸರು ಬೆಂಬಲ ನೀಡಿದ್ದಾರೆ. ಅಲ್ಲದೆ ಶಾಸಕರಾದ ವೇದವ್ಯಾಸ ಕಾಮತ್, ರಘುಪತಿ ಭಟ್ ಅವರು ನಮ್ಮನ್ನು ಸಂಪರ್ಕಿಸಿ ನಿಮ್ಮ ಬೇಡಿಕೆಯನ್ನು ನಮಗೆ ಬರೆದು ಕೊಡಿ, ಈ ಬಗ್ಗೆ ನಾವು ವಿಧಾನಸಭೆಯಲ್ಲಿ ವಿಷಯ ಮಂಡನೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಅಶ್ವತ್ಥ್ ಹೇಳಿದರು.

Reporter_Vishwanath Panjimogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.