ETV Bharat / state

ಕಡಬ ಮಹಿಳೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಟ್ವಿಸ್ಟ್: ಪ್ರತಿದೂರು ದಾಖಲು, ವಿಡಿಯೋ ವೈರಲ್​ - ಕಂಬಳಿ ಮಾರಾಟಕ್ಕೆ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಡ್ ಶೀಟ್ ಮಾರಾಟಕ್ಕೆ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಪ್ರಕರಣ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ. ಆರೋಪಿಗಳು ತಮ್ಮ ಮೇಲೆ ಗುಂಪೊಂದು ವಿನಃ ಕಾರಣ ಹಲ್ಲೆ ನಡೆಸಿದೆ ಎಂದು ಬೆಳ್ಳಾರೆ ಪೊಲೀಸ್​ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

twist-for-kadaba-woman-rape-attempt-case
ಕಡಬ ಮಹಿಳೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಟ್ವಿಸ್ಟ್: ಪ್ರತಿದೂರು ದಾಖಲು, ವಿಡಿಯೋ ವೈರಲ್​
author img

By

Published : Oct 22, 2022, 10:09 AM IST

ಬೆಳ್ಳಾರೆ(ದಕ್ಷಿಣ ಕನ್ನಡ): ಬೆಡ್ ಶೀಟ್, ಕಂಬಳಿ ಮಾರಾಟಕ್ಕೆ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಪ್ರಕರಣ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಂಗಳೂರಿನ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ, ಆರೋಪಿಗಳ ತಮ್ಮ ಮೇಲೆ ಗುಂಪೊಂದು ವಿನಃ ಕಾರಣ ಹಲ್ಲೆ ನಡೆಸಿದೆ ಎಂದು ಬೆಳ್ಳಾರೆ ಪೊಲೀಸ್​ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

ಏನಿದು ಘಟನೆ?: ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಮನೆಯೊಂದಕ್ಕೆ ಬೆಡ್ ಶೀಟ್ ಮಾರಾಟಕ್ಕೆ ಕಾರಿನಲ್ಲಿ ಬಂದಿದ್ದ ಮಂಗಳೂರಿನ ಅಡ್ಡೂರು ನಿವಾಸಿಗಳಾದ ರಫೀಕ್‌ ಹಾಗೂ ರಮೀಝುದ್ದೀನ್ ಎಂಬುವರು ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಕರೆದಿದ್ದಾರೆ. ಮಹಿಳೆ ವಿರೋಧಿಸಿದಾಗ ಮೈ, ಕೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಮಹಿಳೆ ಬೊಬ್ಬೆ ಹಾಕಿದಾಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಮಹಿಳೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳೆ ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಈ ಆರೋಪಿಗಳು, ಕಾರು ಪಲ್ಟಿಯಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ ಎಂದು ವರದಿಯಾಗಿತ್ತು.

ಪ್ರತಿದೂರು: ಇದೀಗ ಅತ್ಯಾಚಾರ ಆರೋಪ ಹೊತ್ತ ಇಬ್ಬರೂ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾನು ರಫೀಕ್​ ಜೊತೆ ಬೆಡ್ ಶೀಟ್ ಮಾರಾಟಕ್ಕೆಂದು ಕಡಬ ತಾಲೂಕಿನ ದೋಲ್ಪಾಡಿಗೆ ಗುರುವಾರ ತೆರಳಿದ್ದೆ. ಈ ವೇಳೆ ಅಲ್ಲಿನ ಮನೆಯೊಂದರ ಮಹಿಳೆಯ ಜೊತೆಗೆ ಸ್ವಲ್ಪ ತಕರಾರು ಉಂಟಾಗಿತ್ತು.

ಬಳಿಕ ಹಿಂತಿರುಗಿ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೆದ್ರಾಜೆ ಎಂಬಲ್ಲಿ ಗುಂಪೊಂದು ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿಟ್ಟು, ಕಾರು ತಡೆದು ನಿಲ್ಲಿಸಿದೆ. ಬಳಿಕ ಕಾರಿನಿಂದ ನಮ್ಮನ್ನು ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಹಾಗೂ ಕಬ್ಬಿಣದ ರಾಡ್​​ನಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ ಕಾರಿಗೂ ಕೂಡ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ಳಾರೆ ಪೊಲೀಸ್​ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.

ಈ ದೂರಿನ ಬೆನ್ನಲ್ಲೇ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕಂಬಳಿ ಮಾರುವ ನೆಪದಲ್ಲಿ ಬಂದು ಮಹಿಳೆ ಅತ್ಯಾಚಾರಕ್ಕೆ ಯತ್ನ: ಪರಾರಿಯಾಗುವಾಗ ಆರೋಪಿಗಳ ಕಾರು ಪಲ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.