ಮಂಗಳೂರು: ತುಳು ಕವಿ ಮಾಡಿರುವ ಚಾಲೆಂಜ್ನಿಂದ ತುಳು ಭಾಷೆಯಲ್ಲಿ ಹೊಸ ಹಾಡುಗಳ ನಿರ್ಮಾಣಕ್ಕೆ ನಾಂದಿ ಹಾಡಿದೆ. ಫೇಸ್ಬುಕ್ನಲ್ಲಿ ತುಳು ಕವಿ ಮಾಡಿದ ಮನವಿಗೆ 25ಕ್ಕೂ ಅಧಿಕ ಹಾಡುಗಳು ನಿರ್ಮಾಣವಾಗಿದ್ದು, ತುಳು ಭಾಷೆಗೆ ದೊಡ್ಡ ಕೊಡುಗೆ ನೀಡಿದಂತಾಗಿದೆ.
ತುಳು ಕವಿ, ಸಿನಿಮಾ ಚಿತ್ರಕಥೆಗಾರ ಶಶಿರಾಜ್ ಕಾವೂರು ಲಾಕ್ಡೌನ್ ಸಂದರ್ಭದಲ್ಲಿ ಫೇಸ್ಬುಕ್ ಮೂಲಕ ಹೊಸ ಪ್ರಯತ್ನ ಆರಂಭಿಸಿದ್ದರು. ಹಿರಿಯ ಮತ್ತು ಕಿರಿಯ ಸಾಹಿತಿಗಳ ಕವನಗಳನ್ನು ಹುಡುಕಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು. ಆದಿ ಪ್ರಾಸ, ಅಂತ್ಯ ಪ್ರಾಸವಿರುವ 250 ಕವನಗಳನ್ನು ಹುಡುಕಿ, ಇದಕ್ಕೆ ಸ್ವಂತ ಸಂಗೀತ ಮತ್ತು ರಾಗ ಸಂಯೋಜನೆ ಮಾಡಿ ಹಾಡುವಂತೆ ವಿನಂತಿಸಿದ್ದರು.
ತುಳು ಕವಿಗಳ ಕವಿತೆಯನ್ನು ಹಾಡಾಗಿಸುವ ವಿನಂತಿಯನ್ನು ಚಾಲೆಂಜ್ ಆಗಿ ತೆಗೆದುಕೊಂಡ ತುಳು ಪ್ರಿಯ ಹಾಡುಗಾರರು, ತುಳು ಕವಿತೆಗಳಿಗೆ ಸಂಗೀತ ನೀಡಿ ಹಾಡು ಹಾಡಿದ್ದಾರೆ. ಅದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ತುಳು ಕವಿತೆಗಳನ್ನು ಹಾಡುವ ವಿನಂತಿಯನ್ನು ಸ್ವೀಕರಿಸಿದ ಹಾಡುಗಾರರಲ್ಲಿ ಹಿರಿಯ ಹಾಗೂ ಕಿರಿಯ ಹಾಡುಗಾರರಿದ್ದಾರೆ.
ಇವರು ಹಾಡುಗಳನ್ನು ಸೃಷ್ಟಿಸಿ ಫೇಸ್ಬುಕ್ನಲ್ಲಿ ಹಾಕಿದ್ದು, ಈ ಹಾಡುಗಳನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಶಶಿರಾಜ್ ಕಾವೂರು ಮಾಡಿದ ಈ ಹೊಸ ಪ್ರಯತ್ನದಿಂದ ತುಳು ಸಾಹಿತ್ಯ ಲೋಕಕ್ಕೊಂದು ಕೊಡುಗೆ ನೀಡಿದಂತಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಸಮಯದ ಸದ್ಬಳಕೆಯ ಜೊತೆಗೆ ತುಳು ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.