ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ತುಳು ಲಿಪಿಯ ಹೆಸರಿನ ಫಲಕವನ್ನು ಯುವ ತುಳುನಾಡು ಕುಡ್ಲ ಸಂಘಟನೆಯ ವತಿಯಿಂದ ಹಸ್ತಾಂತರಿಸಲಾಯಿತು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಶಶಿಕುಮಾರ್ ತುಳು ಭಾಷೆ ಕಲಿಯುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಇದೀಗ ಯುವ ತುಳುನಾಡು ಕುಡ್ಲ ಸಂಘಟನೆಯಿಂದ ಶಶಿಕುಮಾರ್, ಆಯುಕ್ತರು, ಮಂಗಳೂರು ಎಂದು ತುಳುಭಾಷೆಯಲ್ಲಿ ಬರೆದಿರುವ ನಾಮಫಲಕವನ್ನು ನೀಡಲಾಗಿದೆ.
ಈ ಫಲಕವನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ವೀಕರಿಸಿ ತಮ್ಮ ಕಚೇರಿಯ ಟೇಬಲ್ನಲ್ಲಿ ಇರಿಸಿದ್ದಾರೆ.
ಇದನ್ನೂ ಓದಿ:ಪ್ರಶ್ನೆ ಪತ್ರಿಕೆ ಸೋರಿಕೆ: ಇಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆ ಮುಂದೂಡಿಕೆ