ETV Bharat / state

ಯುನಿಕೋಡ್ ಪಟ್ಟಿಗೆ ಸೇರ್ಪಡೆಯಿಂದ ತುಳು ಅಧಿಕೃತ ರಾಜ್ಯಭಾಷೆಯಾಗಲು ಸಹಕಾರಿ: ಕತ್ತಲ್‌ಸಾರ್

author img

By

Published : Jul 21, 2021, 3:04 PM IST

Tulu language script: ಕೇಂದ್ರ, ರಾಜ್ಯ ಸರ್ಕಾರ ಹಾಗೂ ಭಾರತೀಯ ಭಾಷಾ ಸಂಸ್ಥಾನದಿಂದ ತುಳು ಲಿಪಿಗೆ ಅಧಿಕೃತ ಮಾನಪತ್ರ ದೊರಕಿರುವುದು ಸಂತಸ ತಂದಿದೆ. ಯುನಿಕೋಡ್ ನಕಾಶೆ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಶಿಫಾರಸುಗೊಂಡಿರುವುದರಿಂದ ತುಳುಭಾಷೆಯು ಅಧಿಕೃತ ರಾಜ್ಯಭಾಷೆಯಾಗಲು ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.

Tulu in a list of Unicode maps
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ‌ ದಯಾನಂದ ಕತ್ತಲ್ ಸಾರ್

ಮಂಗಳೂರು: ತುಳುಲಿಪಿಯು (Tulu script) ಯುನಿಕೋಡ್ ನಕಾಶೆ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಶಿಫಾರಸುಗೊಂಡಿದ್ದು ಅಧಿಕೃತ ರಾಜ್ಯಭಾಷೆಯಾಗಲು ಸಹಕಾರಿಯಾಗಲಿದೆ. ಈ ಮೂಲಕ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಭಾರತೀಯ ಭಾಷಾ ಸಂಸ್ಥಾನದಿಂದ ತುಳುಲಿಪಿಗೆ ಅಧಿಕೃತ ಮಾನಪತ್ರ ದೊರಕಿರುವುದು ಬಹಳ ಸಂತಸ ತಂದಿದೆ ಎಂದು ದಯಾನಂದ ಕತ್ತಲ್ ಸಾರ್ ಹೇಳಿದರು.

ಇಂತಹ ಮಹತ್ತರ ಕಾರ್ಯವನ್ನು ಕೈಗೂಡಿಸಿರುವ ಪ್ರಧಾನಿ‌ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ, ದ.ಕ.ಜಿಲ್ಲೆಯ ಸಂಸದರು, ಸಚಿವರು ಹಾಗೂ ಎಲ್ಲಾ ಶಾಸಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಮಾತನಾಡಿ, ಯುನಿಕೋಡ್ ನಕಾಶೆ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ತುಳುಲಿಪಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಾನ್ಯತೆ ದೊರಕಿದಂತಾಗುತ್ತದೆ. ಜೊತೆಗೆ ತುಳುವರ ಬಹಳ ವರ್ಷಗಳ ಕನಸಾಗಿರುವ ತುಳುಭಾಷೆಗೆ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ದೊರಕಲು ಮಹತ್ತರವಾದ ಹೆಜ್ಜೆಯಾಗಲಿದೆ ಎಂದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್ ರಾಜ್ ಜೈನ್

ಯುನಿಕೋಡ್ ಕನ್ ಸೋರ್ಟಿಯಂ ಬಹಳಷ್ಟು ಸದಸ್ಯ ಸಂಸ್ಥೆಗಳನ್ನು ಒಳಗೊಂಡಿರುವ ವಿಶ್ವದ ಬಹುದೊಡ್ಡ ಸಂಸ್ಥೆ.‌ ಇದರಲ್ಲಿ ಮೈಕ್ರೋಸಾಫ್ಟ್, ಇಂಟಲ್, ವಿಶ್ವದ ಎಲ್ಲಾ ಮೊಬೈಲ್ ತಯಾರಿಕಾ ಸಂಸ್ಥೆಗಳು, ಸಾಫ್ಟ್‌ವೇರ್ ಡೆವಲಪರ್ಸ್ ಸದಸ್ಯ ಸಂಸ್ಥೆಗಳಾಗಿವೆ. ಈ ಮೂಲಕ‌ ಮೊಬೈಲ್, ಕಂಪ್ಯೂಟರ್, ಐಪ್ಯಾಡ್ ಮುಂತಾದ ಯಾವುದೇ ಇ-ವಿದ್ಯುನ್ಮಾನಗಳಲ್ಲಿ ಸುಲಭವಾಗಿ ತುಳುಲಿಪಿಯನ್ನು ಬಳಸಬಹುದು‌ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.